ಬೆಂಗಳೂರು : ಯಡಿಯೂರಪ್ಪನವರೇ ನಿಮಗೆ ಧಮ್ಮು, ತಾಕತ್ತು ಇದ್ಯಾ..? ಇದ್ದರೆ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ವಿ.ಎಸ್ ಉಗ್ರಪ್ಪ, ಸಿಎಂ ಬಿಎಸ್ ವೈಗೆ ಸವಾಲ್ ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಸಂಬಂಧ ಪಟ್ಟ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಇವಾಗ ಎಲ್ರೀ ಶೇ.15ರಷ್ಟು ಬೆಡ್ ಗಳು ಇಲ್ಲ, ಜನ ನಿಮಗೆ ಎಚ್ಚರಿಕೆಯ ಪಾಠ ಕಲಿಸ್ತಾರೆ ಎಂದು ಗುಡುಗಿದ ಉಗ್ರಪ್ಪ, ಸದ್ಯ ಅವ್ಯವಹಾರದ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು. ವಿಶೇಷ ಅಧಿವೇಶನ ಕರೆಯಬೇಕು ಎಂದು ಹೇಳಿದ್ದೇವೆ. ಮಾರ್ಕೆಟ್ ಬೆಲೆ ಹೋಲಿಕೆ ಮಾಡಿದ್ರೆ ಕಡಿಮೆಯಿದೆ. ಇವರು ಮಾತ್ರ ಉಸ್ತುವಾರಿಗಾಗಿ ಕಿತ್ತಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನರಿಗೆ ಯಡಿಯೂರಪ್ಪ ಅವರು ಉತ್ತರದಾಯಿತ್ವ ಆಗಿದ್ದಾರೆ. ದುಡ್ಡು ಲೂಟಿ ಮಾಡಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ ಉಗ್ರಪ್ಪ, ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಮಾಡ್ರಿ, ಮೃತಪಟ್ಟವರ ಅಂತ್ಯಕ್ರಿಯೆ ಸರಿಯಾಗಿ ಮಾಡಿಸಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.








