ಯಡಿಯೂರಪ್ಪ ಬದಲಾವಣೆ ವಿಷ್ಯ ಶುದ್ಧ ಸುಳ್ಳು : ಆರ್.ಅಶೋಕ್
ಬೆಂಗಳೂರು : ಯಡಿಯೂರಪ್ಪ ಬದಲಾವಣೆ ವಿಷ್ಯ ಶುದ್ಧ ಸುಳ್ಳು. ಬಿಎಸ್?ವೈ ಬದಲಾವಣೆ ಮಾಡುವ ಪ್ರಸ್ತಾಪ ಶಾಸಕರ ಮತ್ತು ಕೇಂದ್ರ ನಾಯಕರ ಮುಂದೆಯೂ ಇಲ್ಲ. ಇದು ಹಾಗೆಯೇ ಸೃಷ್ಟಿಯಾಗಿದೆ ಹಾಗೆಯೇ ತೆರೆಮರೆಗೆ ಸರಿಯುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ.
ಅದಕ್ಕೆ ಕಾಲ ಕೂಡಿ ಬರಬೇಕು. ಅಲ್ಲಿಯವರೆಗೆ ತಿರುಕನ ಕನಸು ಕಾಣಬಾರದು. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ.
ಅದಕ್ಕೆ ಕಾಲ ಕೂಡಿ ಬರಬೇಕು. ತಿರುಕನ ಕನಸು, ಬಿಸಿಲು ಕುದುರೆ ಹಿಂದೆ ಓಡಿದರೆ ಏನೂ ಪ್ರಯೋಜನವಿಲ್ಲ.
ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಅರುಣ್ ಸಿಂಗ್ ಬಗ್ಗೆ ಮಾತನಾಡಿ, ನನಗೆ ಅರ್ಥವಾಗದಿರುವ ಪ್ರಶ್ನೆಯೆಂದರೆ, ಬಿಜೆಪಿ ಉಸ್ತುವಾರಿ ಬಂದು ಹೋದಾಗ ಸುದ್ದಿಯಾಗುತ್ತದೆ.
ಕಾಂಗ್ರೆಸ್ ಉಸ್ತುವಾರಿ ಬಂದು ಹೋಗುವುದು ಸುದ್ದಿಯಾಗುವುದೇ ಇಲ್ಲ. ಕೋವಿಡ್ ಕಾರಣದಿಂದ ನಮ್ಮ ಪಕ್ಷದ ರಾಜ್ಯ ಉಸ್ತುವಾರಿ ಬಹಳ ದಿನದ ಮೇಲೆ ಬರುತ್ತಿದ್ದಾರೆ.
ಈ ಬಾರಿ ಬರುತ್ತಿರುವುದು ಸರ್ಕಾರದ ಮತ್ತು ಪಕ್ಷದ ಇಮೇಜ್‍ನ್ನು ಹೆಚ್ಚಿಸಲು. ಸಭೆಗೆ ಸಚಿವರನ್ನು ಕರೆದು ಸರ್ಕಾರದ ಇಮೇಜ್ ಹೆಚ್ಚಿಸಲು ಚರ್ಚಿಸಲಾಗುತ್ತದೆ ಎಂದರು.









