ರಾಜ್ಯ ಸರ್ಕಾರದಿಂದ ಯಶಸ್ವಿನಿ ಯೋಜನೆ ಮರು ಜಾರಿ…
ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ನವೆಂಬರ್ 1 ರಿಂದ ನೋಂದಣಿ ಆರಂಭವಾಗಲಿದೆ.
ಯಶಸ್ವಿನಿ ಯೋಜನೆಗಾಗಿ ರೈತರು ಹಾಗೂ ಸಹಕಾರಿ ಸಂಘಗಳು ಬೇಡಿಕೆ ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.
ನೊಂದಣಿ ಪ್ರಕ್ರಿಯೆಯನ್ನು ನವೆಂಬರ್ 1, 2022 ರಿಂದ ಪ್ರಾರಂಭವಾಗಲಿದೆ. ಯಶಸ್ವಿ ಯೋಜನೆ ಅವಧಿ 01-01-2023 ರಿಂದ 30-12-2023 ರವರೆಗೂ ಜಾರಿಯಲ್ಲಿರುತ್ತದೆ. 1650 ಖಾಯಿಲೆಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತದೆ.
ಯಶಸ್ವಿನಿ ಯೋಜನೆ ಅಡಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆ ವೆಚ್ಚ 5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. 4 ಸದಸ್ಯರ ಕುಟುಂಬಕ್ಕೆ ವರ್ಷಕ್ಕೆ 500 ರೂಪಾಯಿ ವಂತಿಕೆ ಕಟ್ಟಬೇಕಾಗಿದೆ.
yeshaswini scheme: Yeshaswini scheme re-implemented by the state government…