ಮಡಿಕೇರಿ: ಜಮ್ಮು-ಕಾಶ್ಮೀರ (Jammu Kashmir) ಪೂಂಚ್ ನಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಯೋಧ, ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿನ ಯೋಧ (Kodagu soldier) ದಿವಿನ್ (28) ಅವರ ಪಾರ್ಥಿವ ಶರೀರ ಹೂಟ್ಟೂರು ತಲುಪಿದೆ
ಕುಶಾಲನಗದಲ್ಲಿ ದಿವಿನ್ ವಿದ್ಯಾಭ್ಯಾಸ ಮಾಡಿದ್ದ ಜಿಎಂಪಿ ಶಾಲಾ ಮೈದಾನದಲ್ಲೇ ಕೆಲಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ನಂತರ ಕುಶಾಲನಗರದಿಂದ ನೇರವಾಗಿ ಆಲೂರು ಸಿದ್ದಾಪುರಕ್ಕೆ ಪಾರ್ಥಿವ ಶರೀರ ಕೊಂಡೊಯ್ಯಲಾಗುತ್ತದೆ. ದಿವಿನ್ ಅವರ ತೋಟದಲ್ಲಿರುವ ಅವರ ತಂದೆ ಸಮಾಧಿ ಪಕ್ಕದಲ್ಲಿ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಕೊಡಗಿನ ಯೋಧ ಗಂಭೀರ ಗಾಯಗೊಂಡಿದ್ದರು. ದುರಂತದಲ್ಲಿ ಇತ್ತೀಚೆಗಷ್ಟೇ ರಾಜ್ಯದ ನಾಲ್ವರು ಯೋಧರು ಕೂಡ ಹುತಾತ್ಮರಾಗಿದ್ದರು. ಈಗ ದಿವಿನ್ ಕೂಡ ಹುತಾತ್ಮರಾಗಿದ್ದಾರೆ.
ಕೈಮಗ್ಗ ಅಭಿವೃದ್ಧಿ ಆಯುಕ್ತರ ಸಂಸ್ಥೆ ನೇಮಕಾತಿ – 2025
ಕೈಮಗ್ಗ ಅಭಿವೃದ್ಧಿ ಆಯುಕ್ತರ ಸಂಸ್ಥೆ ಮುಂಬೈ, ನಾಗ್ಪುರ, ಅಹಮದಾಬಾದ್, ಇಂಡೋರ್, ಮತ್ತು ರಾಯ್ಗಡ ಸ್ಥಳಗಳಲ್ಲಿ ಒಟ್ಟು 11 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಲಿಖಿತ ಪರೀಕ್ಷೆ ಮತ್ತು ಕೌಶಲ್ಯ...