Mysuru | ಮನುಕುಲಕ್ಕೆ ಯೋಗ ಮುಖ್ಯ : ಪ್ರಧಾನಿ
ಮೈಸೂರು : ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಕೇವಲ ವ್ಯಕ್ತಿಗೆ ಮಾತ್ರ ಯೋಗ ಅಲ್ಲ. ಇದು ಮನುಕುಲಕ್ಕೆ ಯೋಗ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಶ್ವ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಸುಮಾರು 15 ಸಾವಿರ ಯೋಗ ಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಅರಮನೆ ನಗರಿಯಲ್ಲಿ ಯೋಗಾಸನ ಮಾಡಿದರು.
ಖಾಸಗಿ ಹೋಟೆಲಿನಿಂದ ಬೆಳಗ್ಗೆ 6:30ರ ವೇಳೆಗೆ ಅರಮನೆ ಮುಂಭಾಗಕ್ಕೆ ಮೋದಿ ಆಗಮಿಸಿದರು.
ಚುಟುಕಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ವ್ಯಕ್ತಿಗೆ ಮಾತ್ರ ಯೋಗ ಅಲ್ಲ.
ಇದು ಮನುಕುಲಕ್ಕೆ ಯೋಗ ಮುಖ್ಯ. ಯೋಗದಿಂದ ವ್ಯಕ್ತಿಗೆ ಮಾತ್ರ ಶಾಂತಿ ಸಿಗುವುದಿಲ್ಲ. ಇಡಿ ವಿಶ್ವಕ್ಕೆ ಶಾಂತಿ ಸಿಗುತ್ತದೆ .
ಅಲ್ಲದೆ ವಿಶ್ವದ ವಿವಿಧ ಭಾಗದಲ್ಲಿ ಯೋಗ ದಿನಾಚರಣೆ ನಡೆಸುತ್ತಿರುವ ಎಲ್ಲರಿಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಎಂದು ತಿಳಿಸಿದರು.
ಭಾಷಣದ ಬಳಿಕ ಮೋದಿ ವೇದಿಕೆಯಿಂದ ಕೆಳಗೆ ಇಳಿದ ಯೋಗಾಸನ ಮಾಡಲು ನಿಗದಿಯಾದ ಸ್ಥಳಕ್ಕೆ ತೆರಳಿದರು.
ಬೆಳಗ್ಗೆ 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು.








