ಸಚಿವ ಯೋಗೇಶ್ವರ್ 420, ಮೆಗಾ ಸಿಟಿ ಕಳ್ಳ : ರೇಣುಕಾಚಾರ್ಯ ಗರಂ
ಬೆಂಗಳೂರು : ಸಚಿವ ಸಿ.ಪಿ.ಯೋಗೇಶ್ವರ್ 420, ಮೆಗಾ ಸಿಟಿ ಕಳ್ಳ, ಅವರ ರಾಜೀನಾಮೆ ಪಡೆದು, ವಜಾ ಮಾಡಬೇಕು ಎಂದು ಸಿ.ಪಿ ಯೋಗೇಶ್ವರ್ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಗುಸು ಗುಸು ಚರ್ಚೆ ನಡೆಯುತ್ತಿದ್ದು, ಇದರ ಹಿಂದೆ ಸಿ.ಪಿ.ಯೋಗೇಶ್ವರ್ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಾ, ಯಾರೀ 420 ಸಿ.ಪಿ. ಯೋಗೇಶ್ವರ್, ಯಾರೀ ಅವರು ಬಿಜೆಪಿಗೆ, ನಾವು ಮೂಲತಃ ಬಿಜೆಪಿಯವರು ಹೋರಾಟದಿಂದ ಬಂದಿದ್ದೇವೆ.
ಇವರು ಕಾಂಗ್ರೆಸ್ ನಿಂದ ಬಂದು ಅರಣ್ಯ ಸಚಿವರಾದರು, ಲೂಟಿ ಹೊಡೆದರು. ಅಲ್ಲದೆ ಸದಾನಂದಗೌಡರಿಗೂ ಮೋಸ ಮಾಡಿದರು.
ಅವರು ಪಕ್ಷಾಂತರ, ಮೆಗಾ ಸಿಟಿ ದೊಡ್ಡ ಕಳ್ಳ. ಮುಖ್ಯಮಂತ್ರಿಗಳು ಅಂದೇ ಕಠಿಣ ನಿರ್ಧಾರ ತೆಗೆದುಕೊಂಡು ಅವನನ್ನು ಹೊರಗೆ ಹಾಕಬಹುದಿತ್ತು.
ಈ ರೀತಿ ನಾಟಕ ಆಡುತ್ತಿದ್ದಾರೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಇನ್ನು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಇವರ ರಾಜೀನಾಮೆ ಪಡೆದು, ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಲ್.ಸಂತೋಷ್, ಅರುಣ್ ಸಿಂಗ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಮುಖ್ಯಮಂತ್ರಿಗಳನ್ನು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೊಗಳಿದ್ದಾರೆ.
ಆದರೆ ಇದೀಗ ಇವರು ಪ್ರಹ್ಲಾದ್ ಜೋಷಿ ಹೆಸರು ಹೇಳಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.