ಪ್ರತಿ ಪಕ್ಷಗಳ ಮೈತ್ರಿಯನ್ನ ಜನರು ಮತ್ತೆ ತಿರಸ್ಕರಿಸುತ್ತಾರೆ : ಯೋಗಿ ಆದಿತ್ಯನಾಥ್
ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಆಡಳಿತ ಪಕ್ಷ ಬಿಜೆಪಿ , ಕಾಂಗ್ರೆಸ್ ಇತರೇ ಪಾರ್ಟಿಗಳು ಭರ್ಜರಿ ಪ್ರಚಾರ ಶುರು ಮಾಡಿಕೊಂಡಿವೆ.. ಭರಸವಸೆಗಳ ಸುರಿಮಳೆ ಗೈಯುತ್ತಾ , ಬಿಜೆಪಿ ಜನರಿಗೆ ಒಳ್ಳೋಳ್ಳೆ ಯೋಜನೆಗಳನ್ನ ನೀಡುತ್ತಾ ಮತದಾರರ ಸೆಳೆಯುವ ಪ್ರಯತ್ನ ಮಾಡ್ತಿದೆ.. ಇತ್ತ ವಿಪಕ್ಷಗಳು ಬಿಜೆಪಿ ವಿರುದ್ಧ ಒಟ್ಟಾಗಿ ಕಣಕ್ಕೆ ಧುಮುಕಲು ನಿರ್ಧರಿಸಿದ್ದು , ಬಿಜೆಪಿಗೆ ಗೆಲುವು ಬಹಳ ಕಷ್ಟಕರವಾಗಬಹುದು ಎನ್ನಲಾಗ್ತಿದೆ..
ಮೈತ್ರಿ ಬಗ್ಗೆ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು , 2017ರಲ್ಲಿ ವಿರೋಧ ಪಕ್ಷಗಳ ಮೈತ್ರಿಯನ್ನು ರಾಜ್ಯದ ಜನತೆ ಒಪ್ಪಲಿಲ್ಲ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿಯೂ ಜನರು ಅದನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ. ಜನ ವಿಶ್ವಾಸ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಅವರು, ಕನ್ವರ್ ಯಾತ್ರೆಯನ್ನು ಎಸ್ ಪಿ ವಿರೋಧಿಸಿದರೆ, ಬಿಜೆಪಿ ಬೆಂಬಲಿಸುತ್ತದೆ. ಚುನಾವಣೆಯಲ್ಲಿ ಬಿಜೆಪಿ 325 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ನಮ್ಮ ಸರ್ಕಾರದಡಿಯಲ್ಲಿ ಸಮಾಜದ ಯಾವುದೇ ವರ್ಗಗಳು ಹಿಂದುಳಿದಿಲ್ಲ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ತಲುಪಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಸರ್ಕಾರದಡಿ ಲ್ಯಾಂಡ್ ಮಾಫಿಯಾದಿಂದ ಭೂಮಿಯನ್ನು ಮುಕ್ತಗೊಳಿಸಲಾಗಿದೆ ಮತ್ತು ಶಿಕ್ಷಣ ಮಾಫಿಯಾ ಕೂಡ ಇಲ್ಲದಂತಾಗಿದೆ ಎಂದಿದ್ದಾರೆ.








