ರಾಜ್ಯದಲ್ಲೂ ಬುಲ್ಡೋಜರ್ ಮಾದರಿ ಜಾರಿಯಾಗಬೇಕು – M P ರೇಣುಕಾಚಾರ್ಯ
ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಂದ ಸಾರ್ವಜನಿಕರು ಭಯಭೀತರಾಗಿರುವುದು ಗುಟ್ಟಾಗಿ ಉಳಿದಿಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ ಉತ್ತರಪ್ರದೇಶದಂತೆ ರಾಜ್ಯದಲ್ಲೂ ” ಬುಲ್ಡೋಜಾರ್ ಮಾದರಿ ” ಜಾರಿಯಾಗಬೇಕು ಎಂದು ಹೊನ್ನಳ್ಳಿ ಶಾಸಕ ರೇಣುಕಾಚಾರ್ಯ ಅವರು ಟ್ವೀಟ್ ಮಾಡುವ ಮೂಲಕ ಸಿ ಎಂ ಗೆ ಮನವಿ ಮಾಡಿದ್ದಾರೆ.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಸಾರ್ವಜನಿಕರ ಆಸ್ತಿ- ಪಾಸ್ತಿಗಳನ್ನು ಹಾಳು ಮಾಡುವ ” ದೇಶದ್ರೋಹಿಗಳಿಗೆ ” ಸೇರಿದ ಆಸ್ತಿಯನ್ನು ಮುಲಾಜಿಲ್ಲದೆ ಬುಲ್ಡೋಜೋರ್ ಮೂಲಕ ತೆರವುಗೊಳಿಸಿ ಸರರ್ಕಾರ ತನ್ನ ವಶಕ್ಕೆ ಪಡೆಯಬೇಕು. ಇದು ಬಹಜನರ ಒತ್ತಾಸೆಯಾಗಿದೆ.!
ಉತ್ತರಪ್ರದೇಶದಲ್ಲಿ ದೇಶದ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು, ಇಂತಹ ದೇಶದ್ರೋಹಿಗಳಿಗೆ ಬುಲ್ಡೋಜಾರ್ ಮೂಲಕವೇ ಉತ್ತರ ಕೊಟ್ಟಿದ್ದರಿಂದ ನಮ್ಮ ಶತ್ರು ರಾಷ್ಟ್ರದ ಪರ ಜೈ ಜೈ ಎನ್ನುತ್ತಿದ್ದ ” ಪಾಕ್ ಪ್ರೇಮಿಗಳು ” ಈಗ ಬಿಲಾ ಸೇರಿಕೊಂಡಿವೆ ಎಂಬುದನ್ನು ನಾವು ಮರೆಯಬಾರದು!
ಕೆಲವು ಸೈತನಾರಿಗೆ ಈ ದೇಶದ ಕಾನೂನು ನಮ್ಮನ್ನು ಏನು ಮಾಡಲಾರದು ಎಂದುಕೊಂಡಿದ್ದಾರೆ. ಏಕೆಂದರೆ, ನಮ್ಮಲ್ಲಿರುವ ನಕಲಿ ಜಾತ್ಯಾತೀತ ಮನಸ್ಸುಗಳು ಇವರಿಗೆ ಕುಮ್ಮಕ್ಕು ನೀಡುತ್ತಿರುವುದರಿಂದಲೇ ಇವರ ಆಟಾಟೋಪಾಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ.
ಇಲ್ಲಿಯೇ ಹುಟ್ಟಿ, ಈ ನೆಲದಲ್ಲಿ ಬಿತ್ತಿ ಬೆಳೆದ ಅನ್ನ ತಿಂದು, ಇಲ್ಲಿ ಹರಿಯುವ ನೀರು ಕುಡಿದು, ನಾವೆಲ್ಲರೂ ಒಂದೇ ಎನ್ನುತ್ತಲೇ ” ಪಾಕ್ ಪರ ” ಕನಿಕರ ತೋರುವ ಇವರು ಕೊನೆಗೊಂದು ದಿನ ನಮಗೆ ಮುಳುವಾದರೂ ಅಚ್ಚರಿಯಿಲ್ಲ.
ಕೆಜಿ ಹಳ್ಳಿ- ಡಿಜಿ ಹಳ್ಳಿಯಿಂದ ಆರಂಭವಾಗಿ ಶಿವಮೊಗ್ಗದ ಹರ್ಷ ಕಗ್ಗೊಲೆಯಾಗಿ ಹುಬ್ಬಳ್ಳಿಲಿ ಇದೇ ರಕ್ಕಸ ಪ್ರವೃತ್ತಿ ಕಾಣಿಸಿಕೊಂಡಿದೆ. ಮುಂದೆ ಇನ್ಯೇಲ್ಲೋ ಗೊತ್ತಿಲ್ಲ. ರಾಜ್ಯ ಸರ್ಕಾರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಕ್ಷಣವೇ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಲು “ಉತ್ತರಪ್ರದೇಶದ ಮಾದರಿ” ಜಾರಿ ಮಾಡಲು ನನ್ನ ಆಗ್ರಹವಾಗಿದೆ
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗಳಿಗೆ ಬುಲ್ಡೋಜಾರ್ ಮೂಲಕವೇ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನತೆಯ ಪರವಾಗಿ ವಿನಂತಿಸಿಕೊಳ್ಳುವೆ.
ಶಾಂತಿಯಲ್ಲಿದ್ದ ರಾಜ್ಯದಲ್ಲಿ ಕೊಲೆ ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ.ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ.ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ.ತಲೆಗಳನ್ನು ಕತ್ತರಿಸಿ ರುಂಡಗಳನ್ನ ಬೇರೆ ಮಾಡಿಯೆಂದು ಪ್ರಚೋದಿಸುವ ಹೇಳಿಕೆ ಕೊಡುತ್ತಾರೆಂದರೆ. ಇವರಿಗೆ ಈ ದೇಶದ ಕಾನೂನು ಅನ್ವಯವಿಲ್ಲವೇ?
ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಎಸೆಯುವುದನ್ನು ನೋಡುತ್ತಿದ್ದಾರೆ. ಆಸ್ಪತ್ರೆ ದೇವಾಲಯ ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು.ಆದರೆ, ನಾವು ಕಾನೂನನ್ನು ಕೈಗೆ ಪಡೆಯಲು ಇಷ್ಟಪಡುವುದಿಲ್ಲ
ಪ್ರಚೋದನೆ ನಂತರ ಮೌಲ್ವಿ ಹೇಡಿಯ ರೀತಿ ಓಡಿ ಹೋಗಿದ್ದಾನೆ. ಗೂಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನಕ್ಕೆ ಒತ್ತಾಯಿಸುತ್ತೇನೆ. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿಟಿವಿ ಆಧರಿಸಿ ಈಗಾಗಲೇ ಬಂಧನ ಮಾಡಲಾಗುತ್ತಿದೆ. ಗೂಂಡಾ ಕಾಯ್ದೆ ಅಡಿ ಅವರನ್ನು ಬಂಧನ ಮಾಡಿ, ಗಡಿಪಾರು ಮಾಡಬೇಕು
ಕೊಲೆ, ದೊಂಬಿ ಮಾಡುವುದು, ಜಾಮೀನು ಪಡೆದು ವಾಪಸ್ ಬರೋದು ಅವರಿಗೆ ಅಭ್ಯಾಸ ಆಗಿದೆ. ಘಟನೆಗಳಿಗೆ ಕಾರಣರಾದ ವ್ಯಕ್ತಿ, ಸಂಘಟನೆ, ಪಕ್ಷದ ಬಗ್ಗೆ ಗಮನ ಹರಿಸಬೇಕು. ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಯ್ತು. ಇನ್ನೆಲ್ಲಿ ಗಲಭೆ ಮಾಡುತ್ತಾರೋ ಗೊತ್ತಾಗುವುದಿಲ್ಲ.ಸರ್ಕಾರ ಇದರ ಕಡೆ ಗಮನ ಹರಿಸಬೇಕು.
ಪುಂಡರಿಗೆ ಕಠಿಣ & ನಿರ್ದಾಕ್ಷಿಣ್ಯ ಪದಗಳ ಅರ್ಥ ಗೊತ್ತಾಗಬೇಕು ಎಂದರೆ “ಬುಲ್ಡೋಜರ್” ಅನ್ನು ಬಳಸಬೇಕೆಂದು ಆಗ್ರಹಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
yogi adityanath bulldozer model is needed for karnataka: renukacharya








