28 ವರ್ಷಗಳ ಬಳಿಕ ತಾಯಿ ಬೇಟಿ ಮಾಡಿ ಆಶಿರ್ವಾದ ಪಡೆದ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಹುಟ್ಟೂರಾದ ಉತ್ತರಾಖಂಡದ ಪೌರಿಗೆ ತೆರಳಿರುವ ಯೋಗಿ, ತಮ್ಮ ತಾಯಿ ಸಾವಿತ್ರಾ ದೇವಿ(85) ಅವರನ್ನು ಭೇಟಿ ಮಾಡಿ ಅವರ ಆಶಿರ್ವಾದ ಪಡೆದುಕೊಂಡಿದ್ದಾರೆ.
ತಾಯಿಗೆ ನಮಸ್ಕಾರ ಮಾಡುತ್ತಿರುವ ಫೋಟೋವನ್ನು ಸ್ವತಃ ಯೋಗಿ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ “ಮಾ” ಎಂದು ಶೀರ್ಷಿಕೆ ನೀಡಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ಉತ್ತರಾಖಂಡ್‌ನ ತಮ್ಮ ತವರೂರು ಪೌರಿಯಲ್ಲಿದ್ದಾರೆ. ಅವರು ಉತ್ತರಪ್ರದೇಶ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದಾರೆ. ಬುಧವಾರ ನಡೆಯಲಿರುವ ತಮ್ಮ ಸೋದರಳಿಯನ ಕೇಶ ಮುಂಡನ ಸಮಾರಂಭಕ್ಕಾಗಿ ಅವರು ತಮ್ಮ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.








