ಸಮೀಕ್ಷೆಯಲ್ಲಿ ಅತ್ಯುತ್ತಮ ಸಿಎಂ ಆಗಿ ಹೊರಹೊಮ್ಮಿದ ಯೋಗಿ – ಪಟ್ಟಿಯಲ್ಲಿ ಸ್ಥಾನ ಪಡೆಯದ ಪಿಣರಾಯಿ
ಹೊಸದಿಲ್ಲಿ, ಅಗಸ್ಟ್ 9: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಶದಲ್ಲೇ ಅತ್ಯುತ್ತಮ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿಗೆ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಅತ್ಯುತ್ತಮ ಸಿಎಂ ಸ್ಥಾನ ಪಡೆದಿದ್ದಾರೆ. ಇಂಡಿಯಾ ಟುಡೆ-ಕಾರ್ವಿ ಇನ್ಸೈಟ್ಸ್ ಮೂಡ್ ಆಫ್ ದಿ ನೇಷನ್ (ಎಂಒಟಿಎನ್) ನಡೆಸಿದ ಸಮೀಕ್ಷೆಯು ಈ ವಿಷಯವನ್ನು ಬಹಿರಂಗಪಡಿಸಿದೆ.

ಯೋಗಿ ಆದಿತ್ಯನಾಥ್ ಒಟ್ಟು ಮತಗಳಲ್ಲಿ 24% ಗಳಿಸಿ ಸತತ ಮೂರನೇ ಬಾರಿಗೆ ಅತ್ಯುತ್ತಮ ಸಿಎಂ ಎನಿಸಿಕೊಂಡಿದ್ದಾರೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಉನ್ನತ ಕಾರ್ಯ ನಿರ್ವಹಿಸುತ್ತಿರುವ ಏಳು ಮುಖ್ಯಮಂತ್ರಿಗಳಲ್ಲಿ ಆರು ಮಂದಿ ಮುಖ್ಯಮಂತ್ರಿ ಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರದವರಾಗಿದ್ದಾರೆ . ನಂತರದ ಸ್ಥಾನದಲ್ಲಿ ಕ್ರಮವಾಗಿ , ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಇದ್ದು, ನಾಲ್ಕನೇ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳ) ಇದ್ದಾರೆ.

ಆದರೆ ಕೇರಳದ ಸಿಪಿಎಂ ಪಕ್ಷದ ಸಿಎಂ ಪಿಣರಾಯಿ ವಿಜಯನ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಎಮ್.ಒ.ಟಿ.ಎನ್ ಸಮೀಕ್ಷೆಯನ್ನು ಜುಲೈ 15, 2020 ಮತ್ತು ಜುಲೈ 27, 2020 ರ ನಡುವೆ ನಡೆಸಲಾಗಿತ್ತು.
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ್, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ , ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ನಡುವೆ ಮತದಾನವನ್ನು ನಡೆಸಲಾಯಿತು.








