yograj bhatt
ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರು, ಲೇಖಕ, ಕಾದಂಬರಿಕಾರ, ನಟ, ಖ್ಯಾತ ಕ್ರೈಂ ಡೈರಿ ಕಾರ್ಯಕ್ರಮ ನಿರೂಪಕ, ಚಿತ್ರಕಥೆ ಬರಹಗಾರ, ಪತ್ರಕರ್ತ, ನಿರೂಪಕ, ಓ ಮನಸೇ ಪತ್ರಿಕೆಯ ಸಂಪಾದಕರೂ ಕೂಡ ಆಗಿದ್ದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರು ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ರಾಜಕೀಯ ಮುಖಂಡರು, ಸಿನಿಮಾ ರಂಗದ ಗಣ್ಯರು ಸಹ ಸಂತಾಪ ಸೂಚಿಸುತ್ತಿದ್ದಾರೆ. ನಟ ಸುದೀಪ್, ಜಗ್ಗೇಶ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಅದರಂತೆ ರವಿ ಬೆಳಗೆರೆ ಅವರ ನಿಧನಕ್ಕೆ ವಿಕಟಕವಿ ಯೋಗರಾಜ್ ಭಟ್ ಅವರು ಸಂತಾಪ ಸೂಚಿಸಿದ್ದಾರೆ.
ಇಂದು ಬೆಳಿಗ್ಗೆ ಪ್ರಾರ್ಥನಾ ಶಾಲೆಯ ಬಳಿ ಭಟ್ಟರು ರವಿ ಬೆಳಗೆರೆ ಅವರ ಅಂತಿಮ ದರ್ಶನ ಪಡೆದಿದರು. ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದು ರವಿ ಅವರ ಸಾವಲ್ಲ, ಹುಟ್ಟು ಎಂದಿದ್ದಾರೆ. ಅಲ್ಲದೇ ಫೊನಿನಲ್ಲಿ ನಾವಿಬ್ಬರು ಸದಾ ಮಾತನಾಡುತ್ತಿದ್ದೆವು. ಕೆಲವು ದಿನಗಳ ಹಿಂದಷ್ಟೆ ಸಹ ಪರಸ್ಪರ ಚರ್ಚೆ ಮಾಡಿದ್ದೆವು. ಅವರ ಆರೋಗ್ಯದ ಬಗ್ಗೆ ನಮಗೆ ಆತಂಕವೂ ಇತ್ತು. ಕಾವ್ಯಾತ್ಮಕ ಆತ್ಮ ಅವರದ್ದು, ಸಂಗೀತವನ್ನು ಬಹಳವಾಗಿ ಮೋಹಿಸುತ್ತಿದ್ದರು. ಮೊನ್ನೆಯವರೆಗೂ ನಮ್ಮ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡುತ್ತಿದ್ವಿ. ಒಬ್ಬ ಕನ್ನಡಾಭಿಮಾನಿಯಾಗಿ ಇದು ಅವರ ಸಾವಲ್ಲ, ಹುಟ್ಟು ಎಂದಿದ್ದಾರೆ.
‘ಅಕ್ಷರ ಮಾಂತ್ರಿಕ’ನ ನಿಧನಕ್ಕೆ ಸಂತಾಪ ಸೂಚಿಸಿದ ‘ನವರಸ ನಾಯಕ’
ಇನ್ನೂ ಮುಂದುವರೆದು ಮಾತನಾಡಿದ ಭಟ್ಟರು, ಧೈರ್ಯಕ್ಕೆ ಮತ್ತೊಂದು ಹೆಸರು ರವಿ ಬೆಳಗೆರೆ. ಅವರಲ್ಲೊಬ್ಬ ಭಿನ್ನವಾದ ಪತ್ರಕರ್ತನೂ ಇದ್ದ. ರವಿ ಬೆಳಗೆರೆ ಇನ್ನಿಲ್ಲ ಎಂಬುದನ್ನು ಒಪ್ಪಿಕೊಂಡು, ಅವರ ನೆನಪುಗಳು, ಅವರ ಪುಸ್ತಕಗಳೊಡನೆ ಜೀವಿಸುವುದನ್ನು ಕಲಿಯಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
yograj bhatt
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel