ನೀವು ರೈತರ ಕ್ಷಮೆ ಯಾಚಿಸಿ, ಆದರೆ ಸಚಿವರನ್ನು ತೆಗೆದುಹಾಕಬೇಡಿ. ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಎಂಟು ಮಂದಿ ಸಾವಿಗೀಡಾದ ಲಖೀಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕ್ಷಮೆಯಾಚಿಸಿದ್ದಾರೆ ಆದರೆ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮತ್ತೊಮ್ಮೆ ಪ್ರತಿಪಕ್ಷಗಳು ಲಖೀಂಪುರ ಘಟನೆಯನ್ನು ಎತ್ತುತ್ತಿವೆ. ಸಚಿವರ ಪುತ್ರ ರೈತರನ್ನು ಕೊಂದಿದ್ದು, ಇದೊಂದು ಸಂಚು ಎಂದು ವರದಿಯಲ್ಲಿ ಹೇಳಲಾಗಿದೆಯೇ ಹೊರತು ಪ್ರತ್ಯೇಕ ಘಟನೆಯಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಏನೂ ಮಾಡುತ್ತಿಲ್ಲ. ನೀವು (ಮೋದಿ) ರೈತರ ಕ್ಷಮೆ ಯಾಚಿಸಿ, ಆದರೆ ಸಚಿವರನ್ನು ತೆಗೆದುಹಾಕಬೇಡಿ.
ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯನ್ನು “ಅಪಘಾತ” ಎಂದು ಕರೆದ ಕೇಂದ್ರ ಸಚಿವ ಮಿಶ್ರಾ ಅವರ ಹೇಳಿಕೆಯನ್ನು ಗಾಂಧಿ ಟೀಕಿಸಿದರು. “ನಾವು ಅವರನ್ನು (ಅಜಯ್ ಮಿಶ್ರಾ) ಬಿಡುವುದಿಲ್ಲ; ಇಂದು ಅಥವಾ ನಾಳೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಗಾಂಧಿ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ವಾರ, ಲಖಿಂಪುರ ಖೇರಿ ಘಟನೆಯು ಉದ್ದೇಶಪೂರ್ವಕ, ಪೂರ್ವ ಯೋಜಿತ ಪಿತೂರಿ ಎಂದು ಹೇಳುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ವರದಿಯ ಕುರಿತು ಕಾಂಗ್ರೆಸ್ ನಾಯಕರು ಲೋಕಸಭೆಯಲ್ಲಿ ಚರ್ಚೆ ನಡೆಸಿದರು.








