ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಟ್ವಿಟ್ಟರ್ ನಲ್ಲಿ ತಮ್ಮ ಮಗ ಇಜ್ಹಾನ್‍ನೊಂದಿಗೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ತಾಯಿ ಮಗನ ಮುದ್ದಾದ ಫೋಟೋ ನೆಟ್ಟಿಗರ ಮನಗೆದ್ದಿದೆ.
ಟೆನ್ನಿಸ್ ಕ್ರೀಡೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ಸಾನಿಯಾ ಮಿರ್ಜಾ ಟೆನ್ನಿಸ್ ಫೀಲ್ಡ್ ನಲ್ಲಿ ಮಗನನ್ನು ಎತ್ತಿಕೊಂಡು ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾನಿಯಾ ಟ್ವಿಟರ್ ನಲ್ಲಿ ಮಗನ ಫೋಟೋದೊಂದಿಗೆ ಈ ಒಂದು ಚಿತ್ರದಲ್ಲಿ ನನ್ನ ಬದುಕು. ಇದನ್ನು ಬೇರೆ ರೀತಿ ಹೇಳಲು ನನಗೆ ಸಾಧ್ಯವಿಲ್ಲ. ಇಂಡೋನೇಷ್ಯಾದ ವಿರುದ್ಧ ನಾವು ಟೈ ಮ್ಯಾಚ್ ಆಡಿ ಮೊದಲ ಬಾರಿಗೆ ಬಾರಿಗೆ ಭಾರತ ಫೆಡ್ ಕಪ್ ಟೆನ್ನಿಸ್‍ನ ವರ್ಲ್ಡ್ ಗ್ರೂಪ್ ಪ್ಲೇ ಆಫ್‍ಗೆ ಎಂಟ್ರಿಕೊಟ್ಟಿದೆವು. ನಾನು ಸಾಧನೆ ಮಾಡಲು, ನಾನು ಮಾಡುವ ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಇವನು ನನಗೆ ಪ್ರೇರಣೆ ಎಂದು ಬರೆದುಕೊಂಡಿದ್ದಾರೆ.
https://twitter.com/MirzaSania/status/1237790308160532482








