ಬೆಂಗಳೂರು : ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಬಿಚ್ಚಬೇಕಾಗಿಲ್ಲ ಎಂದು ರಾಧಾರಮಣ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಹೇಳಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಇನ್ ಸ್ಟಾದಲ್ಲಿ ಕಾವ್ಯಗೌಡ, “ಆತ್ಮೀಯ ಹುಡುಗಿಯರೇ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನೀವು ಎಂದಿಗೂ ನಿಮ್ಮ ಬಟ್ಟೆಗಳನ್ನು ಬಿಚ್ಚಬೇಕಾಗಿಲ್ಲ. ಅದೇ ರೀತಿ ಮದುವೆಗೂ ಮುನ್ನ ಡೇಟಿಂಗ್ ಹೋಗುವುದು ಸರಿ. ಆದರೆ ಮಂಚಕ್ಕೆ ಹೋಗುವುದು ಸರಿಯಿಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್ ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ.
ನಿಮ್ಮನ್ನು ತನ್ನ ಮನೆಗೆ ಕರೆದುಹೋಗುವ ಹುಡುಗನನ್ನು ಪಡೆಯಿರಿ. ಹೋಟೆಲ್ ಗಳಿಗೆ ಕರೆದುಕೊಂಡು ಹೋಗುವವನಲ್ಲ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಬೆತ್ತಲೆಯನ್ನು ಕೇಳುವವನಲ್ಲ. ಯಾರು ನಿಮ್ಮ ಮನಸ್ಸು ಮತ್ತು ಹೃದಯವನ್ನು ಅರ್ಥ ಮಾಡಿಕೊಳ್ಳುತ್ತಾನೋ ಅಂತಹ ಹುಡುಗನನ್ನು ಪಡೆಯಿರಿ. ನಿಮ್ಮ ದೇಹವನ್ನು ಬಯಸುವವನಲ್ಲ.
ಗೌರವ ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದು. ಒಬ್ಬ ನಿಜವಾದ ವ್ಯಕ್ತಿ ಎಂದಿಗೂ ಮಹಿಳೆರಿಗೆ ನೋವುಂಟು ಮಾಡುವುದಿಲ್ಲ. ಮಹಿಳೆ ಎಂದರೆ ಕೇವಲ ಗೃಹಿಣಿ ಮಾತ್ರವಲ್ಲ. ಅವಳು ನಿಮ್ಮ ಮನೆಗೆ ಬಂದಮೇಲೆ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾ, ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಅಂತಹ ಮಹಿಳೆಯರಿಗೆ ಗೌರವ ತೋರಿಸುವುದು ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ ಎಂದು ರಾಧಾ ಮಿಸ್ ಖ್ಯಾತಿಯ ಕಾವ್ಯಗೌಡ ಬರೆದುಕೊಂಡಿದ್ದಾರೆ.
https://youtu.be/lwfLpyPrcX0








