‘ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ’ : ಸದನದಲ್ಲಿ ಸಿದ್ದರಾಮಯ್ಯ ಮಾತು
ಬೆಂಗಳೂರು : ಸದನದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಅಂದ್ರೆ ಅಲ್ಲಿ ಒಂದಿಷ್ಟು, ಹಾಸ್ಯ ಇರಲೇಬೇಕು. ಹಾಸ್ಯ, ವ್ಯಂಗ್ಯಭರಿತವಾಗಿ ಭಾಷಣ ಮಾಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ.
ಸದ್ಯ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಮಾತನಾಡುತ್ತಾ ‘ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ’ ಎಂದು ಪ್ರಶ್ನಿಸಿದರು. ಆಗ ಇಡೀ ಸದನ ನಗೆಗಡಲಲ್ಲಿ ತೇಲಿತು.
ಹೌದು..! ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದರು, ಈ ವೇಳೆ ‘ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ’ ಎಂದು ಪ್ರಶ್ನಿಸಿದರು.
ಆಗ ಲಿಂಬಾವಳಿ ನಾನಿನ್ನು ಈಗ ಬಂದಿದ್ದೀನಿ ಅಂತ ನಗುತ್ತಾ ಕುತ್ಕೊಂಡ್ರು. ಮತ್ತೆ ಸಿದ್ದರಾಮಯ್ಯ ವಿಸ್ಕಿ ಕುಡಿದಿದ್ದೀಯೋ ಇಲ್ವೋ..? ನಾವು ಶ್ರೀನಿವಾಸ್ ಮನೆಯಲ್ಲಿ ಸೇರಿದ್ವಲ್ಲಪ್ಪ.
ಅಲ್ಲಿ ನೀನು ಕುಡಿದಿರಲಿಲ್ವೇ ಎಂದು ಕುಟುಕಿದಾಗ, ನಿಮಗೆ ಗೊತ್ತಲ್ಲಾ ಸರ್ ಎಂದು ಅರವಿಂದ ಲಿಂಬಾವಳಿ ನಗುತ್ತಾ ಹೇಳಿದರು.
ಒಮ್ಮೆ ಶ್ರೀನಿವಾಸ್ ಮನೆಯಲ್ಲಿ ಸೇರಿದ್ದೆವು ಅಲ್ವಾ, ಅಲ್ಲಿ ಕುಡಿದಿದ್ದಿಯಾ ಅಲ್ವಾ?. ನನಗೆ ಗೊತ್ತಿಲ್ಲ ಎಂದು ಮರು ಪ್ರಶ್ನೆ ಹಾಕಿದ ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರೆಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel