yougov-2022-sports-buzz-rankings | ಧೂಳೆಬ್ಬಿಸಿದ ಐಪಿಎಲ್
ಮಿಲಿಯನ್ ಡಾಲರ್ ಟೂರ್ನಿ ಅಂತಾನೆ ಕರೆಸಿಕೊಳ್ಳುವ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರ್ಯಾಂಕಿಂಗ್ ನಲ್ಲಿ ಧೂಳೆಬ್ಬಿಸಿದೆ. yougov-2022-sports-buzz-rankings-IPL
ಯುಗೋವ್ಸ್ 2022 ಸ್ಫೋರ್ಟ್ಸ್ ಬಝ್ ಶ್ರೇಯಾಂಕದಲ್ಲಿ ಐಪಿಎಲ್ ಅಗ್ರಸ್ಥಾನದಲ್ಲಿ ನಿಂತಿದೆ. ಎರಡನೇ ಸ್ಥಾನದಲ್ಲಿ ಟೋಕಿಯೊ ಒಲಿಂಪಿಕ್ಸ್ ಇದೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಆಧರಿಸಿ ಶ್ರೇಯಾಂಕಗಳನ್ನು ನೀಡಲಾಗಿದೆ ಎಂದು Yugovs ತಿಳಿಸಿದೆ.
ಐಪಿಎಲ್‌ನ 14 ನೇ ಸೀಸನ್‌ನ ಮೊದಲ ಲೆಗ್ ಭಾರತದಲ್ಲಿ ನಡೆಯಿತು. ಕೊರೊನಾದಿಂದಾಗಿ ಟೂರ್ನಿಯ ಎರಡನೇ ಲೆಗ್ ಯುಎಇಯಲ್ಲಿ ನಡೆಸಲಾಗಿತ್ತು. ಆದರೂ ಭಾರತೀಯ ಅಭಿಮಾನಿಗಳನ್ನು ರಂಜಿಸಿದ್ದ ಐಪಿಎಲ್ 50.8 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಯುಗೋವ್ಸ್ ಸ್ಫೋರ್ಟ್ಸ್ ಶ್ರೇಯಾಂಕದಲ್ಲಿ ಐಪಿಎಲ್‌ನಲ್ಲಿ ಅಗ್ರಸ್ಥಾನಕ್ಕೇರಿರುವುದು ಇದು ಸತತ ಎರಡನೇ ಬಾರಿ. ಕಳೆದ ವರ್ಷ ಪ್ರಕಟವಾದ ಶ್ರೇಯಾಂಕದಲ್ಲೂ ಐಪಿಎಲ್ ಅಗ್ರಸ್ಥಾನಕ್ಕೇರಿತ್ತು.
ಐಪಿಎಲ್ ನಂತರ ಭಾರತದಲ್ಲಿ ಟೋಕಿಯೊ ಒಲಿಂಪಿಕ್ಸ್ ಎರಡನೇ ಅತ್ಯಂತ ಜನಪ್ರಿಯವಾಗಿದೆ.
49.2 ಅಂಕಗಳೊಂದಿಗೆ ಕೇವಲ 1.6 ಪಾಯಿಂಟ್ಸ್ ನೊಂದಿಗೆ ಟೋಕಿಯೋ ಒಲಿಂಪಿಕ್ಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ.
ಐಸಿಸಿ ಪಂದ್ಯಾವಳಿಗಳನ್ನು ಸಾಮಾನ್ಯವಾಗಿ ಭಾರತದಲ್ಲಿ ಹೆಚ್ಚಿನ ಜನರು ವೀಕ್ಷಿಸುತ್ತಾರೆ. ಆದರೆ ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಿರಾಸೆ ಅನುಭವಿಸಿತ್ತು.
ಆದರೂ ವಿಶ್ವಕಪ್ ಗೆ ಭಾರತೀಯ ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್, 45.9 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಈ ಮೂರರ ನಂತರ ಫುಟ್ಬಾಲ್ ವಿಶ್ವಕಪ್ (28.3 ಅಂಕ), ಇಂಡಿಯನ್ ಸೂಪರ್ ಲೀಗ್ (20.4 ಅಂಕ) ಮತ್ತು ವಿಂಬಲ್ಡನ್ ಚಾಂಪಿಯನ್‌ಶಿಪ್ (ಟೆನಿಸ್, 18 ಅಂಕ) ಕ್ರಮವಾಗಿ 4,5,6 ಸ್ಥಾನಗಳಲ್ಲಿ ನಿಂತಿವೆ.