ಹೈದರಾಬಾದ್ : ಟಾಲಿವುಡ್ ನ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟಿರುವ ಯಂಗ್ ಟೈಗರ್ ಗೆ ಅಭಿಮಾನಿಗಳು, ಸಿನಿ ತಾರೆಯರು ಶುಭಾಷಯಗಳ ಸುರಿಮಳೆ ಸುರಿಸಿದ್ದಾರೆ. ಏತನ್ಮಧ್ಯೆ ಆರ್ ಆರ್ ಆರ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಎನ್ ಟಿಆರ್ ಅವರ ಹೊಸ ಲುಕ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಜೂನಿಯರ್ ಎನ್ ಟಿಆರ್ ಸಿಕ್ಸ್ ಪ್ಯಾಕ್ ನಲ್ಲಿ ಬೊಂಬಾಟ್ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎನ್ ಟಿ ಆರ್ ವಿಶ್ ಮಾಡಿದ ರಾಜಮೌಳಿ
ಬಾಹುಬಲಿ ಬ್ರಹ್ಮ, ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಜೂನಿಯರ್ ಎನ್ ಟಿಆರ್ ಅವರನ್ನು ಅಪ್ಪಿಕೊಂಡಿರುವ ವಿಶೇಷ ಫೋಟೋವನ್ನು ಇನ್ ಸ್ಟಾಗಾಮ್ ನಲ್ಲಿ ಶೇರ್ ಮಾಡಿ ಹ್ಯಾಪಿ ಬರ್ತ್ ಡೇ ತಾರಕ್ ಎಂದು ವಿಶ್ ಮಾಡಿದ್ದಾರೆ. ನೀವು ಮೊದಲಿನಿಂದಲೂ ನನ್ನ ಪ್ರಯಾಣದ ಭಾಗವಾಗಿದ್ದೀರಿ ಎನ್ನವುದೇ ನನಗೆ ಖುಷಿ. ಹುಟ್ಟುಹಬ್ಬದ ಶುಭಾಷಯಗಳು ತಾರಕ್. ನಿಮಗಿಂತ ಉತ್ತಮವಾದ ಭೀಮನನ್ನು ನಾನು ಹುಡುಕಲು ಸಾಧ್ಯವಾಗಲ್ಲ ಎಂದು ಬರೆದುಕೊಂಡಿದ್ದಾರೆ.
ಇನ್ನು ಅರುಂದತಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಕೂಡ ತಾರಕ್ ಗೆ ವಿಶ್ ಶುಭಕೋರಿದ್ದು, ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿ ಹ್ಯಾಪಿ ಬರ್ತ್ ಡೇ ಜೂನಿಯರ್ ಎನ್ ಟಿಆರ್ ಅಂದಿದ್ದಾರೆ. ನಿಮ್ಮ ಆರ್‌ಆರ್‌ಆರ್ ಸಿನಿಮಾಕ್ಕಾಗಿ ಕಾಯುತ್ತಿರುವೆ. ಇಡೀ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದಾರೆ.
ಹಾಗೆಯೇ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಜೂನಿಯರ್ ಎನ್‌ಟಿಆರ್ ಅವರ ಸಿಕ್ಸ್ ಪ್ಯಾಕ್ ಫೋಟೋವನ್ನು ಟ್ವೀಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಇನ್ನು ಟ್ವಿಟ್ಟರ್ ನಲ್ಲಿ ಎನ್ ಟಿ ಆರ್ ಅಭಿಮಾನಿಗಳು ಶುಭಾಷಯ ಕೋರುತ್ತಿರುವ ಪರಿಗೆ #HappyBirthdayNTR ಹಾಗೂ #HappyBirthdayTarak ಹ್ಯಾಶ್ ಟ್ಯಾಗ್ ಗಳು ಟ್ರೆಂಡಿಂಗ್ ನಲ್ಲಿದೆ.
https://www.instagram.com/p/CAZcfAsA5CD/?utm_source=ig_web_copy_link
ಸದ್ಯ ತಾರಕ್ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಆರ್‌ಆರ್‌ಆರ್ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. 400 ರಿಂದ 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ ಟಿಆರ್ ಕಾಣಿಸಿಕೊಳ್ಳಲಿದ್ದಾರೆ.








