ಪಾಕಿಸ್ತಾನದ ನ್ಯೂ ಸೆನ್ಸೇಷನ್ ವೇಗಿ ನಶೀಮ್ ಶಾ ಅತ್ಯಂತ ಕಿರಿಯ ವಯಸ್ಸಿನಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಬ್ಲಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ನ೩ನೇ ದಿನ ನಶೀಮ್ ಶಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
16 ವರ್ಷ 359 ದಿನಗಳ ನಶೀಮ್ 2ನೇ ಇನ್ನಿಂಗ್ಸ್ನ 7ನೇ ಓವರ್ ನಲ್ಲಿ ಮೊದಲಿಗೆ ನಜ್ಮುಲ್ ಹುಸೇನ್ ವಿಕೆಟ್ ಪಡೆದರು. ಬಳಿಕ ಎರಡು ಎಸೆತಗಳಲ್ಲಿ ತಾಜುಲ್ ಇಸ್ಲಾಂ ಮತ್ತು ಮಹ್ಮದುಲ್ಲಾ ಅವರನ್ನು ಪೆವಿಲಿಯನ್ ಗೆ ಅಟ್ಟಿದರು. ಈ ಮೂಲಕ ಯುವ ಕಿಲಾಡಿ ನಶೀಮ್ 17ವರ್ಷಗಳ ಹಿಂದೆ ಬಾಂಗ್ಲಾದ ಅಲೋಕ್ ಕಪಾಲಿ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಇನ್ನು ಈ ಮೊದಲು ಬಾಂಗ್ಲಾದ ಅಲೋಕ್ ಕಪಾಲಿ, 19 ವರ್ಷವಿದ್ದಾಗ ಹ್ಯಾಟ್ರಿಕ್ ಕಬಳಿಸಿ ದಾಖಲೆ ಬರೆದಿದ್ದರು.
ನಶೀಮ್ ಶಾ ಒಟ್ಟಾರೆ ಪಾಕ್ ಪರ ಹ್ಯಾಟ್ರಿಕ್ ಸಾಧಿಸಿದ ನಾಲ್ಕನೇ ಬೌಲರ್ ಆಗಿದ್ದಾರೆ. ಇದಕ್ಕೆ ಮುನ್ನ ವಾಸೀಂ ಅಕ್ರಂ, ಅಬ್ದುಲ್ ರಜಾಕ್ ಹಾಗೂ ಮಹ್ಮದ್ ಸಮಿ ಈ ಸಾಧನೆ ಮಾಡಿದ್ದರು.