Bangalore | ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ
ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ
ಬೆಂಗಳೂರು ನಗರದ ಕೂಡ್ಲುಗೇಟ್ ಬಳಿ ಘಟನೆ
ಶಿವಕುಮಾರ್ ಎಂಬಾತ ಕೊಲೆ ಆರೋಪಿ
ವಿಜಯಪುರ ಮೂಲದ ದಾನೇಶ್ವರಿ ಮೃತ ಯುವತಿ
ಮದುವೆ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ
ಬೆಂಗಳೂರು : ಮದುವೆಯಾಗುವಂತೆ ಕೇಳಿದ್ದ ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಕೂಡ್ಲುಗೇಟ್ ಬಳಿ ನಡೆದಿದೆ.
ವಿಜಯಪುರ ಮೂಲದ ದಾನೇಶ್ವರಿ ಕೊಲೆಯಾದ ಮಹಿಳೆಯಾಗಿದ್ದಾರೆ. ಶಿವಕುಮಾರ್ ಕೊಲೆ ಆರೋಪಿಯಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಮೃತ ದಾನೇಶ್ವರಿ, ಶಿವಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಎರಡು ದಿನಗಳ ಹಿಂದೆ ಶಿವಕುಮಾರ್ ಕೆಲಸ ಮಾಡುವ ಸ್ಥಳಕ್ಕೆ ಬಂದು ದಾನೇಶ್ವರಿ ಮದುವೆ ಆಗುವಂತೆ ಕೇಳಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಶಿವಕುಮಾರ್ ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ನಂತರ ದಾನೇಶ್ವರಿಯನ್ನು ಕೂಡ್ಲುಗೇಟ್ ಬಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾನೇಶ್ವರಿ ಕೊನೆಯುಸಿರೆಳೆದಿದ್ದಾರೆ. youth murdered girlfriend by pouring petrol over her and setting her on fire in bengaluru









