ಕರ್ಪ್ಯೂನಲ್ಲೂ ಭರ್ಜರಿ ಕ್ರಿಕೆಟ್ ಆಡಿದ ಯುವಕರು
ಮೈಸೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಎರಡು ವಾರ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದರೆ ನಗರದ ದೊಡ್ಡಕೆರೆ ಮೈದಾನದಲ್ಲಿ ವೀಕೆಂಡ್ ಕರ್ಪ್ಯೂ ಮರೆತು ಯುವಕರು ಭರ್ಜರಿ ಕ್ರಿಕೇಟ್ ಆಡಿದ್ದಾರೆ.
ಈ ಸ್ಥಳಕ್ಕೆ ಆಗಮಿಸಿದ ನಜರ್ಬಾದ್ ಪೊಲೀಸರು ಯುವಕರಿಗೆ ತರಾಟೆಗೆ ತೆಗೆದುಕೊಂಡು, ಹೊರಗೆ ಬಾರದಂತೆ ಸೂಚನೆ ನೀಡಿದ್ದಾರೆ. ನಂತರ ಯುವಕರು ಕ್ರಿಕೆಟ್ ಅರ್ಧಕ್ಕೆ ನಿಲ್ಲಿಸಿ ಹೊರಟು ಹೋಗಿದ್ದಾರೆ.








