ಸೇಡು ತೀರಿಸಿಕೊಳ್ಳಲು ಹೋಗಿ ಕಂಬಿ ಹಿಂದೆ ಸೇರಿದ ಯುವಕರು bangalore saaksha tv
ಬೆಂಗಳೂರು : ಕುಡಿದ ಮತ್ತಿನಲ್ಲಿ ಸೇಡು ತೀರಿಸಿಕೊಳ್ಳಲು ಹೋಗಿ ಬಾರ್ ಬದಲು ಅಂಗಡಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಯುವಕರನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೌನೇಶ್ ಮತ್ತು ಮೌನೇಶ್ ಎ ಬಂಧಿತ ಆರೋಪಿಗಳಾಗಿದ್ದಾರೆ.
ಡಿಸೆಂಬರ್ 15 ರಂದು ಇವರು ಬಾರ್ ವೊಂದರಲ್ಲಿ ಕುಡಿದು ಗಲಾಟೆ ಮಾಡಿದ್ದರು. ಇದರಿಂದ ಬಾರ್ ಸಿಬ್ಬಂದಿ ಇವರಿಂದ ದಂಡ ಕಟ್ಟಿಸಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಮೌನೇಶ್ ಮತ್ತು ಮೌನೇಶ್ ಎ ಬಾರ್ ಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದರು.
ಅದರಂತೆ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತಂದಿದ್ದಾರೆ. ಆದರೇ ಕುಡಿದ ಮತ್ತಿನಲ್ಲಿ ಬಾರ್ ಬದಲಿಗೆ ವಸಂತಪುರದಲ್ಲಿ ಕಿರಾಣಿ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಇವರ ಈ ದುಷ್ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು, ಸಿಸಿ ಟಿ ವಿ ಕ್ಯಾಮೆರಾ ದೃಶ್ಯಗಳನ್ನು ಆಧಾರಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.









