ಹುಟ್ಟುಹಬ್ಬ ಆಚರಿಸದೇ ರೈತರಿಗೆ ಬೆಂಬಲ ಸೂಚಿಸಿದ ಯುವರಾಜ
ನವದೆಹಲಿ : ಇಂದು ಕ್ರಿಕೆಟ್ ಜಗತ್ತಿನ ಯುವರಾಜ, ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಜನ್ಮದಿನ.
39ನೇ ವಸಂತಕ್ಕೆ ಕಾಲಿಟ್ಟಿರುವ ಸಿಕ್ಸರ್ ಕಿಂಗ್ ಗೆ ಹಲವಾರು ಗಣ್ಯರು, ಸ್ನೇಹಿತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳ ಮೂಲಕ ಶುಭಕೋರುತ್ತಿದ್ದಾರೆ.
ಆದ್ರೆ ಯುವರಾಜ್ ಸಿಂಗ್ ಮಾತ್ರ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿದ್ದಾರೆ.
Yuvraj Singh Birthday | ಯುವಿ ಗೆದ್ದಿದ್ದು ಎರಡಲ್ಲ.. ನಾಲ್ಕು ವಿಶ್ವಕಪ್..!
ಈ ಕುರಿತು ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ‘ಹುಟ್ಟುಹಬ್ಬಗಳು ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಇರುವ ಅವಕಾಶ. ಈ ದಿನ ನಾನು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿಲ್ಲ,
ಸರ್ಕಾರ ಮತ್ತು ರೈತರ ನಡುವೆ ನಡೆಯುತ್ತಿರುವ ಮಾತುಕತೆಗಳು ಒಂದು ಪರಿಹಾರ ಕಾಣಲಿ. ನಿಸಂದೇಹವಾಗಿ ರೈತರೇ ನಮ್ಮ ದೇಶದ ಜೀವನಾಡಿ. ತಂದೆ ಯೋಗ್ರಾಜ್ ಹೇಳಿಕೆ ನನಗೆ ಬೇಸರ ತಂದಿದೆ.
ಅವರ ನಿಲುವೇ ಬೇರೆ. ನನ್ನದೇ ಬೇರೆ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ರಸ್ಲರ್ಗಳು, ಬಾಕ್ಸರ್ಗಳು, ಹಾಕಿ ಆಟಗಾರರು ಸೇರಿದಂತೆ ಅನೇಕ ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









