ಪವರ್ ಫುಲ್ ಆಗಿ ‘ಯುವರತ್ನ’ ಬರುತ್ತಿದ್ದಾನೆ: ರಿಲೀಸ್ ಡೇಟ್ ರಿವೀಲ್..!
ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸ್ಯಾಂಡಲ್ ವುಡ್ ಸಿನಿಮಾ ಯುವರತ್ನ ಯಾವಾಗ ತೆರೆಗಪ್ಪಳಿಸುತ್ತೆ ಅಂತ ಪವರ್ ಸ್ಟಾರ್ ಪುನೀತ್ ರಾಜುಕುಮಾರ್ ಅಭಿಮಾನಿಗಳು ಅಷ್ಟೇ ಅಲ್ಲ ಕನ್ನಡ ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.
ಇದೀಗ ಅಭಿಮಾನಿಗಳ ಕಾತರಕ್ಕೆ ತೆರಬಿದ್ದಿದೆ. ಯುವರತ್ನ ರಿಲೀಸ್ ಡೇಟ್ ಅಧಿಕೃತವಾಗಿ ಘೋಷಣೆ ಆಗಿದೆ. ಪವರ್ ಫುಲ್ ಆಗಿ ಏಪ್ರಿಲ್ 01 ಕ್ಕೆ ಥಿಯೇಟರ್ ಗಳಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ.
ದಳಪತಿ ವಿಜಯ್ ‘ಮಾಸ್ಟರ್’ ನಿನಿಮಾ ರೀಲೀಸ್ ಗೂ ಮುನ್ನವೇ ಲೀಕ್…!
ಇನ್ನೂ ಲಾಕ್ ಡೌನ್ ಆದನಂತರ ಥಿಯೆಟರ್ ಗಳು ರೀ ಓಪನ್ ಆದ ಬಳಿಕ ಸ್ಟಾರ್ ನಟರ ಸಾಲು ಸಾಲು ಹೈವೋಲ್ಟೇಜ್ ಸಿನಿಮಾಗಳು ರಿಲೀಸ್ ಲಿಸ್ಟ್ ನಲ್ಲಿದೆ. ಯುವರತ್ನಗೂ ಮುನ್ನ ಧ್ರುವ ಸರ್ಜಾ ನಟನೆಗೆ ಬಹುನಿರೀಕ್ಷೆಯ ಪೊಗರು ಸಿನಿಮಾ ಅಥವಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾ ರಿಲೀಸ್ ಆಗುವ ನಿರೀಕ್ಷೆಯಲ್ಲಿದೆ. ಒಟ್ಟಾರೆ ಏಪ್ರಿಲ್ ನಲ್ಲಿಯೇ ಅನೇಕ ಸ್ಟಾರ್ ಸಿನಿಮಾಗಳು ತೆರೆಗಪ್ಪಳಿಸಲಿವೆ ಎನ್ನಲಾಗ್ತಾಯಿದೆ. ಒಟ್ಟಾರೆ ಸ್ಟಾರ್ ಸಿನಿಮಾಗಳಲ್ಲಿದೆ ಬೇಸರಗೊಂಡಿದ್ದ ಸಿನಿಪ್ರಿಯರಿಗೆ 2021 ರಲ್ಲಿ ಸಾಲು ಸಾಲು ಸಿನಿಮಾಗಳ ದರ್ಶನವಾಗಲಿದ್ದು, ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಶಿಳ್ಳೆ ಚಪ್ಪಾಳೆಗಳು, ಫ್ಯಾನ್ಸ್ ಗಳ ಡ್ಯಾನ್ಸ್ ಕಿರುಚಾಟ ಇವೆಲ್ಲಾ ಮತ್ತೊಮ್ಮೆ ಕಂಡುಬರಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








