ಫಸ್ಟ್ ಡೇ ಹೇಗಿತ್ತು ಗೊತ್ತಾ ಯುವರತ್ನನ ಹವಾ..!
ಥಿಯೇಟರ್ ಗಳ ಮುಂದೆ ಅಪ್ಪು ಅಭಿಮಾನಿಗಳ ಜಾತ್ರೆ..!
ಸೋಷಿಯಲ್ ಮೀಡಿಯಾಗಳಲ್ಲೂ ರಾಜಕುಮಾರನದ್ದೇ ಸೌಂಡು..!
ಹೇಗಿತ್ತು ನೋಡಿ ಪ್ರೇಕ್ಷಕರ ರಿಯಾಕ್ಷನ್..!
ಥಿಯೇಟರ್ ನಲ್ಲಿ ಹುಚ್ಚೆದ್ದು ಕುಣಿದ ಅಪ್ಪು ಫ್ಯಾನ್ಸ್..!
ಯುವರತ್ನ ಸಿನಿಮಾಗೆ ಸಿಪ್ರೇಕ್ಷಕರ ಫುಲ್ ಮಾರ್ಕ್ಸ್..!
ಒಂದೊಳ್ಳೆ ಕಥೆಗೆ ಪವರ್ ಸ್ಟಾರ್ ಸಾಥ್..!
ಈ ಸಲ ಕಪ್ ನಮ್ದೇ.. ಎಂದು ಕುಣಿದಾಡಿದ ಆಡಿಯನ್ಸ್..!
ಒಟ್ಟಾರೆ ಯುವರತ್ನ ಸೂಪರ್ ಡೂಪರ್ ಹಿಟ್..!
ಬರೆದಿಟ್ಟುಕೊಳ್ಳಿ ಯುವರತ್ನ ಸಿನಿಮಾ ಪಕ್ಕಾ 100 ಡೇಸ್..!
ಪ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ..!
ಒಳ್ಳೆ ಕಥೆಯ ಅಂಬಾಸಿಡರ್ ಅಪ್ಪು, ಸಿನಿಮಾದ ನಿಜವಾದ ಹೀರೋ ಕಥೆಯೇ..!
ಈಗಿನ ಜೆನರೇಶನ್ ನ ಯುವಕರು ನೋಡ್ಲೇಬೇಕಾದ ಸಿನಿಮಾ..!
ಕಂಟೆಂಟ್ ಬೇಸ್ಡ್ ಸಿನಿಮಾ, ಮಾಸ್ ಲುಕ್, ಅಪ್ಪು ಆಟಿಟ್ಯೂಟ್, ಡ್ಯಾನ್ಸ್, ಆಕ್ಷನ್ ಸೀನ್ಸ್, ಸಿನಿಮಾ ತುಂಬಾ ಪಂಚಿಂಗ್ ಡೈಲಾಗ್ಸ್, ಕಥೆಯೇ ಸಿನಿಮಾ ಹೀರೋ , ಅಪ್ಪು ಖದರ್ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡು ಪವರ್ ಫುಲ್ ಲುಕ್ ನಲ್ಲಿ ಅಭಿಮಾನಿಗಳ ಮುಂದೆ ಮುಂದೆ ಬಂದಿದ್ದಾರೆ. ಸಿನಿಮಾ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನ ಕಾಣ್ತಿದೆ. ಥಿಯೇಟರ್ ಗಳ ಮುಂದೆ ಅಪ್ಪು ಅಭಿಮಾನಿಗಳು ಭರ್ಜರಿ ಡ್ಯಾನ್ಸ್ ಮಾಡಿ ಕುಣಿದಾಡಿ ಕುಪ್ಪಳಿಸಿದ್ದಾರೆ. ಪೊಗರು, ರಾಬರ್ಟ್ ಸಿನಿಮಾ ಬಳಿಕ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ಯುವರತ್ನ.
ಕರ್ನಾಟಕದಲ್ಲಿ ಸುಮಾರು 400ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಯುವರತ್ನ ಬಿಡುಗಡೆಯಾಗಿದೆ.
ಇನ್ನು ಆಂಧ್ರ ಮತ್ತು ತೆಲಂಗಾಣದಲ್ಲೂ 200ರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಯುವರತ್ನ ಅಬ್ಬರ ಶುರುವಾಗಿದೆ.
ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದನೇ ಶೋ ಪ್ರಾರಂಭವಾಗಿದ್ದು, ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುವ ಮೂಲಕ ಯುವರತ್ನನನ್ನು ಸ್ವಾಗತಿಸಿದ್ದಾರೆ.
ಮಕ್ಕಳು ಕೂಡ ಡ್ಯಾನ್ಸ್ ಮಾಡಿ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿಕೊಂಡಿದ್ದಾರೆ. ಇನ್ನೂ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಯುವರತ್ನ ಬಿಡುಗಡೆಯಾಗಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಫ್ಯಾನ್ ಶೋ ರಿಲೀಸ್ ಮಾಡಲಾಗಿತ್ತು. ಇನ್ನೂ ವಾರದಿಂದಲೇ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಮಾಡಿ ಕಾದು ಕುಳಿತಿದ್ದ ಫ್ಯಾನ್ಸ್ ಗಳು ಸಿನಿಮಾ ನೋಡಿ 100 ಡೇಸ್ ಪಕ್ಕಾ ಅನ್ನೋ ರಿಯಾಕ್ಷನ್ ಕೊಡ್ತಿದ್ದಾರೆ. ಸಿನಿಮಾವನ್ನ ಈಗಿನ ಜಡೆನರೇಶನ್ ನೋಡಲೇ ಬೇಕು. ಒಂದೊಳ್ಳೆ ಮೆಸೇಜ್ ಶಾಲಾ ಕಾಲೇಜುಗಳ ಖಾಸಗೀಕರಣ ಬಗ್ಗೆ ಸಿನಿಮಾ ನಿಂತಿದೆ. ಒಂದೊಳ್ಲೆ ಕಥೆ ಇಟ್ಕೊಂಡು ಸಂತೋಶ್ ರಾಮ್ ಅವರು ಅಪ್ಪು ಇಮೇಜ್ ಗೆ ತಕ್ಕನಂತೆ ಸ್ಕ್ರೀನ್ ಪ್ಲೇ ಕೆಲಸ ಮಾಡಿದ್ದಾರೆ. ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದ ರಾಜಕುಮಾರ್ ಸೂಪರ್ ಹಿಟ್ ಆದ ಬಳಿಕ ಮೂಡಿಬಂದ 2ನೇ ಸಿನಿಮಾ ಇದು.
ಸಿನಿಮಾದಲ್ಲಿ ಎಂದಿನಂತೆ ಪ್ರಕಾಶ್ ರಾಜ್ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪಾತ್ರ ಯಾವುದೇ ಇರಲಿ ಪ್ರಕಾಶ್ ರಾಜ್ ಆ ಪಾತ್ರಕ್ಕೆ ತಮ್ಮನ್ನ ಬಿಟ್ರೆ ಬೇರೆಯವರು ಸ್ಯೂಟ್ ಆಗೋದೇ ಇಲ್ಲವೇನೋ ಅನ್ನೋ ಅಷ್ಟರ ಮಟ್ಟಿಗೆ ಕ್ಯಾರೆಕ್ಟರ್ ನಲ್ಲಿ ಇನ್ವಾಲ್ವ್ ಆಗಿರ್ತಾರೆ. ಇನ್ನೂ ಖಡಕ್ ವಿಲ್ಲನ್ ಆಗಿ ಧನಂಜಯ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ನಟಿ ಸಾಯೇಶಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಭಾರಿ ನಿರೀಕ್ಷೆಯೊಂದಿಗೆ ಬಂದ ಯುವರತ್ನ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆಯೂ ಹುಸಿಯಾಗಿಲ್ಲ. ಬ್ಯಾಕ್ ಬ್ಯಾಕ್ ಸಿನಿಮಾ ನೋಡುದ್ರೂ ಎಲ್ಲೂ ಸಿನಿಮಾ ಕಥೆ ಬೋರ್ ಆಗೋದಿಲ್ಲ. ಅದ್ರ ಮೇಲಿನ ಇಂಟರೆಸ್ಟ್ ಕಡಿಮೆಯಾಗೋದೇ ಇಲ್ಲ. ಇಂದು ಬೆಳ್ಳಂಬೆಳಗ್ಗೆ ಮೊದಲ ಶೋ ನೋಡಿದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದು ಹೊಂಬಾಳೆ ಫಿಲ್ಮ್ಸ್ ನ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ.
ಯುವರತ್ನನ ಇಂಟ್ರಡಕ್ಷನ್ ಫೈಟ್ ಸೀನ್ಸ್ ನ ಮಿಸ್ ಮಾಡಿಕೊಳ್ಳೋ ಹಾಗೆಯೇ ಇಲ್ಲ. ಸಿನಿಮಾ ಅತ್ಯಂತ ಅದ್ಭುತವಾಗಿದೆ. ಹಿನ್ನಲೆ ಸಂಗೀತ ಅದ್ಭುತವಾಗಿದೆ. ಪವರ್ ಸ್ಟಾರ್ ಯಂಗ್ ಆಗಿ ಕಾಣಿಸಿಕೊಂಡಿದ್ದು, ಅಪ್ಪುನ ಡಿಫರೆಂಟ್ ಇಮೇಜ್ ಈಗಿನ ಯೂಥ್ಸ್ ಗಳನ್ನ ಬದಲಾವಣೆ ಹಾದಿಯತ್ತ ಪ್ರೇರಿಸಪಿಸುವಂತಿದೆ. ಒಟ್ಟಾರೆ ಸಿನಿಮಾ ಸೂಪರ್ ಡೂಪರ್ ಆಗಿದ್ದು, ಪಕ್ಕಾ 100 ಡೇಸ್ ಓಡೋದ್ರಲ್ಲಿ ನೋ ಡೌಟ್. ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾತನಾಡುದ್ರೆ, ಹಿಂದಿನ ಇಲ್ಲಾ ರೆಕಾರ್ಡ್ ಛಿದ್ರ ಛಿದ್ರವಾಗೋದ್ರಲ್ಲಿ ದೂಸ್ರಾ ಮಾತೇ ಇಲ್ಲ.
ತಮ್ಮ ಆಕ್ಷನ್-ಸಾಹಸ ಚಿತ್ರ ‘ರಾಮ ಸೇತು’ ವಿನ ಶೂಟಿಂಗ್ ಪ್ರಾರಂಭಿಸಿದ ಅಕ್ಷಯ್ ಕುಮಾರ್
RRR ನಲ್ಲಿ ಹೇಗಿರಲಿದೆ ‘ಸಿಂಗಂ’ ಅವತಾರ – ಏ. 2ಕ್ಕೆ ಅಜಯ್ ಲುಕ್ ರಿಲೀಸ್..!








