Yuvarathna
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿದಿದೆ.
ಲಾಕ್ಡೌ ನ್ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತ ಗೊಂಡಿತ್ತು.
ಇದೀಗ ಸಂಪೂರ್ಣವಾಗಿ ಶೂಟಿಂಗ್ ಮುಗಿದ ಸಂಭ್ರಮದಲ್ಲಿ ಕುಂಬಳಕಾಯಿ ಹೊಡೆದಿದೆ ಯುವರತ್ನ (Yuvarathna) ಟೀಂ..
ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಸುಯೇಶಾ ಸೈಗಲ್ ಭಾಗಿಯಾಗಿದ್ದರು.
ಈ ವೇಳೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಪಾಲ್ಗೊಂಡಿದ್ದರು.
ಈ ಸಂತಸವನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
”ಯುವರತ್ನ ಚಿತ್ರೀಕರಣ ನಿನ್ನೆ ಮುಕ್ತಾಯವಾಯಿತು. ನನ್ನ ಬೆನ್ನು ತಟ್ಟಿ ಸಿನಿಮಾವನ್ನ ಯಶಸ್ವಿ ಆಗಿ ಮುಗಿಸಿಕೊಟ್ಟ ಪುನೀತ್ ಸರ್ ಗೆ, ವಿಜಯ್ ಸರ್ ಗೆ, ವೆಂಕಟ್ ಸರ್ ಗೆ, ಶಿವು ಸರ್ ಗೆ ನನ್ನ ಡೈರೆಕ್ಷನ್ ತಂಡಕ್ಕೆ ಹಾಗು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ” ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿಯಿದ್ದು, ಆದಷ್ಟೂ ಬೇಗ ಮುಗಿಸಿ ತೆರೆಮೇಲೆ ಬರಲು ಸಜ್ಜಾಗಲಿದೆ.
ಕಂಗನಾ ರಣಾವತ್ ‘ತಲೈವಿ’ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಎದುರಾಗಿದೆ ಕಂಟಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel