yuvarathna promo
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಂಜೆ ಸಿಗಲಿದೆ ಭರ್ಜರಿ ಗುಡ್ ನ್ಯೂಸ್..!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಇಂದು ಸಂಜೆ ಸರಿಯಾಗಿ 4.30ಕ್ಕೆ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ‘ಪ್ರೋಮೊ’ ಬಿಡುಗಡೆ ಆಗಲಿದೆ. ‘ಪವರ್ ಆಫ್ ಯುತ್’ ಪ್ರೊಮೊ ಬಿಡುಗಡೆ ಆಗಲಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಈ ಬಗ್ಗೆ ನಿರ್ದೇಶಕ ಸಂತೋಶ್ ಆನಂದ್ ರಾಮ್ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತೆ ವರ್ಕೌಟ್ ಶುರುಮಾಡಿದ ‘ಪೈಲ್ವಾನ್’ : ಟ್ವೀಟ್ ಮೂಲಕ ಸುದೀಪ್ ಮಾಹಿತಿ..!
ವಿಶೇಷದಲ್ಲಿ ಈ ಪ್ರೊಮೋ ದಲ್ಲಿ ಸಂತೋಶ್ ಆನಂದ್ ರಾಮ್, ಪುನೀತ್ ರಾಜ್‌ಕುಮಾರ್ ಜೊತೆಗೆ ಕಾಣಿಸಿಕೊಳ್ತಿದ್ದಾರಂತೆ. ಹೊಂಬಾಳೆ ಫಿಲಮ್ಸ್‌ನ ಯೂಟ್ಯೂಬ್ ಚಾನೆಲ್ ನಲ್ಲಿ ‘ಪವರ್ ಆಫ್ ಯುತ್’ ಪ್ರೊಮೊ ಬಿಡುಗಡೆ ಆಗಲಿದೆ. ಸಂತೋಶ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ ಸ್ಯಾಮಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ವಿಜಯ್ ಕಿರಗಂದೂರು ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಸಾಯೆಶಾ ನಾಯಕಿಯಾಗಿ ನಟಿಸಿದ್ದಾರೆ. ನಟ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ ಇನ್ನೂ ಹಲವರ ತಾರಾಬಳಗ ಚಿತ್ರದಲ್ಲಿದೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಜೇಮ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ ನಾಯಕಿ ಪ್ರಿಯಾ ಆನಂದ್ ಅವರು ಮತ್ತೊಮ್ಮೆ ಅಪ್ಪುಗೆ ಜೋಡಿಯಾಗಿರುವುದು ವಿಶೇಷ.
yuvarathna promo
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








