ಜವಾಬ್ದಾರಿಯುತ ಭಾರತೀಯ ಪ್ರಜೆಯಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ – ಯುವರಾಜ್ ಸಿಂಗ್
ಯುವಿ ಕ್ಷಮೆ ಕೇಳು… ಯುವಿ ಜಾತಿ ನಿಂದನೆ ಮಾಡಿದ್ದಾರೆ… ಯುವಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು… ಯುವಿ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ… ಹೀಗೆ ಕಳೆದ ಮೂರು ನಾಲ್ಕು ದಿನಗಳಿಂದ ಯುವರಾಜ್ ಸಿಂಗ್ ಹೆಸರು ವಿವಾದಗಳ ಸುತ್ತನೇ ಸುತ್ತುತ್ತಿತ್ತು. ಇದೀಗ ಯುವಿ ಎಲ್ಲದಕ್ಕೂ ತೆರೆ ಎಳೆದಿದ್ದಾರೆ. ಇನ್ನೂ ಯಾರು ಈ ಬಗ್ಗೆ ಮಾತನಾಡುವಂತಿಲ್ಲ. ಯಾಕಂದ್ರೆ ಯುವರಾಜ್ ಸಿಂಗ್ ಕ್ಷಮೆ ಕೇಳಿದ್ದಾರೆ.
ಹೌದು, ರೋಹಿತ್ ಶರ್ಮಾ ಜೊತೆಗಿನ ಇನ್ಸ್ಟಾಗ್ರಾಂ ಲೈವ್ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ಯಜುವೇಂದ್ರ ಚಾಹಲ್ ಟಿಕ್ ಟಾಕ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆಗ ಯುವಿ ತಮಾಷೆಯಾಗಿ ಒಂದು ಪದ ಬಳಸಿದ್ದಾರೆ. ಆದ್ರೆ ಒಂದು ಪದ ಬಳಕೆ ಈ ರೀತಿ ಬೆಂಕಿ ಹತ್ತಿಕೊಳ್ಳುತ್ತೆ ಅಂತ ಆಗ ಯುವಿಗೂ ಗೊತ್ತಿರಲಿಲ್ಲ. ಚಾಹಲ್ ಟಿಕ್ಟಾಕ್ ವಿಡಿಯೋ ಬಗ್ಗೆ ಚರ್ಚೆ ಮಾಡಿಕೊಂಡು ಮನಸ್ಸಿಗೆ ಬಂದ ಹಾಗೇ ನಕ್ಕಿದ್ದಾರೆ.
ಆದ್ರೆ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಯುವರಾಜ್ ಸಿಂಗ್ ವಿರುದ್ಧ ಹರಿಯಾಣದ ಹನ್ಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವರಾಜ್ ಸಿಂಗ್ ಜಾತಿ ನಿಂದನೆ ಮಾಡಿದ್ದಾರೆ. ಅವರು ಆ ಪದವನ್ನು ಹೇಳುವ ಮೂಲಕ ಆ ಜಾತಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ವಕೀಲರಾದ ರಜತ್ ಕಾಲ್ಸನ್ ಅವರು ದೂರು ನೀಡಿದ್ದರು.
ಆದ್ರೆ ಈ ಘಟನೆ ನಡೆದಿರುವುದು ಏಪ್ರಿಲ್ ತಿಂಗಳಿನಲ್ಲಿ. ಟಿಕ್ಟಾಕ್ ವಿಡಿಯೋ ಬಗ್ಗೆ ಹಾಗೇ ಯುವಿ ಬಾಯಿಂದ ಆ ಪದ ಬಂತು. ಆದ್ರೆ ಇದು ಮೇ2ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತೆ ಅಂತ ಯುವಿಗೂ ಗೊತ್ತಿರಲಿಲ್ಲ. ಆದ್ರೆ ದೂರು ನೀಡುವುದಕ್ಕಿಂತ ಮುನ್ನವೇ ಮುಂಚೆನೇ ಯುವರಾಜ್ ಕ್ಷಮೆ ಕೇಳಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಒತ್ತಾಯ ಮಾಡಿದ್ದರು.
ಇದೀಗ ಯುವಿ ಕ್ಷಮೆ ಕೇಳಿದ್ದಾರೆ.ನಾನು ನನ್ನ ಗೆಳೆಯನ ಜೊತೆ ಮಾತನಾಡುತ್ತಿದೆ. ನಾನು ಆ ರೀತಿ ಹೇಳಬಾರದಿತ್ತು. ಆದ್ರೆ ಉದ್ದೇಶ ಪೂರ್ವಕವಾಗಿ ನಾನು ಆ ಮಾತನ್ನು ಹೇಳಿಲ್ಲ. ಹೀಗೆ ಮಾತನಾಡುವಾಗ ಆ ರೀತಿಯ ಮಾತು ಬಂದು. ಹಾಗಂತ ಯಾರ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದ್ರೂ ನೋವಾಗಿದ್ರೆ ನಾನು ಕ್ಷಮೆ ಕೇಳುತ್ತೇನೆ. ಈ ಬಗ್ಗೆ ನನಗೂ ವಿಷಾದವಿದೆ ಎಂದು ಯುವರಾಜ್ ಸಿಂಗ್ ಟ್ವಿಟ್ ಮಾಡಿದ್ದಾರೆ.
ಯುವಿ ಸ್ಪಷ್ಟೀಕರಣ – ನಾನು ಜಾತಿ, ಮತ, ಲಿಂಗ, ಬಣ್ಣದ ಆಧಾರದಲ್ಲಿ ಯಾರನ್ನು ಅಸಮಾನತೆಯಿಂದ ನೋಡಿಲ್ಲ. ಆ
ನಂಬಿಕೆ ನನಗಿದೆ. ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ. ನನಗೆ ಬದುಕಿನ ಘನತೆಯ ಮೇಲೆ ಅಪಾರವಾದ ನಂಬಿಕೆ ಇದೆ. ಹಾಗೇ ಪ್ರತಿಯೊಬ್ಬರಿಗೂ ಗೌರವವಿದೆ. ಅದನ್ನು ಗೌರವಿಸಬೇಕಾಗಿದೆ. ಗೆಳೆಯನ ಜೊತೆ ಮಾತನಾಡುವಾಗ ತಪ್ಪಾಗಿ ಅಥೈಸಿಕೊಳ್ಳಲಾಗಿದೆ. ಅದು ಈಗ ಅನಗತ್ಯ ಎಂಬುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಒಬ್ಬ ಜವಾಬ್ದಾರಿಯುತ ಭಾರತೀಯನಾಗಿ ನಾನು ಯಾರೊಬ್ಬರ ಭಾವನೆಗಳನ್ನು ಅಥವಾ ಭಾವನೆಗಳಿಗೆ ನೋವುಂಟು ಮಾಡಿದ್ರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಬಗ್ಗೆ ನನಗೂ ವಿಷಾದವಿದೆ ಎಂದು ಯುವರಾಜ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.








