ತಮಾಷೆ ಮಾಡೋಕೆ ಹೋಗಿ ಜಾತಿ ಬಲೆಯೊಳಗೆ ಬಿದ್ದ ಯುವರಾಜ್ ಸಿಂಗ್
ಕ್ರಿಕೆಟ್‍ಗೆ ಜಾತಿ -ಧರ್ಮವಿಲ್ಲ. ಹಾಗಂತ ಕ್ರಿಕೆಟ್ ನಲ್ಲಿ ಇಲ್ಲ ಎಂದು ಹೇಳುವಂತಿಲ್ಲ. ಜಾತಿ ನಿಂದನೆ – ಅಥವಾ ಜನಾಂಗೀಯ ನಿಂದನೆ ಹಿಂದಿನಿಂದಲೂ ನಡೆಯುತ್ತಿತ್ತು. ಈ ಬಗ್ಗೆ ಮುಖ್ಯವಾಗಿ ವೆಸ್ಟ್ ಇಂಡೀಸ್ ಆಟಗಾರರು ಹೆಚ್ಚು ನಿಂದನೆಗೆ ಒಳಪಟ್ಟಿದ್ದರು ಎಂಬುದನ್ನು ಕೆಲವೊಂದು ದಿನಗಳ ಹಿಂದೆ ವೆಸ್ಟ್ ಇಂಡೀಸ್ ಆಟಗಾರರು ಹೇಳಿಕೊಂಡಿದ್ದರು.
ಇದೀಗ ಭಾರತದಲ್ಲೂ ಜಾತಿ ನಿಂದನೆಯ ಆರೋಪ ಕೇಳಿಬಂದಿದೆ. ಅದು ಕೂಡ ಕ್ರಿಕೆಟ್ ಒಬ್ಬರ ಮೇಲೆ. ಆ ಕ್ರಿಕೆಟರ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆತನ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಬಗ್ಗೆ ಅಭಿಮಾನಿಗಳು ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು. ಅದೇ ಆತನ ಬ್ಯಾಟ್ ನಿಂದ ಸಿಡಿಯುವ ಸಿಕ್ಸರ್‍ಗಳಿಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ ಕಣ್ಣೀರು ಹಾಕಿಕೊಂಡು ಪ್ರಾರ್ಥನೆ ಮಾಡಿದ್ದರು. ಆದ್ರೆ ಆತ ತನ್ನ ಒಡನಾಡಿಗೆ ಸಾಮಾಜಿಕ ಜಾಲ ತಾಣದಲ್ಲಿ ಬಳಸಿರುವ ಒಂದು ಪದದ ಕಿಡಿ ಈಗ ಬೆಂಕಿಯಾಗಿ ಮಾರ್ಪಡುತ್ತಿದೆ.
ಹೌದು, ಯುವರಾಜ್ ಸಿಂಗ್ ಈಗ ಜಾತಿ ನಿಂದನೆಯ ಆರೋಪಕ್ಕೆ ಸಿಲುಕಿದ್ದಾರೆ. ರೋಹಿತ್ ಶರ್ಮಾ ಜೊತೆಗಿನ ಇನ್‍ಸ್ಟಾಗ್ರಾಂ ಲೈವ್ ಕಾರ್ಯಕ್ರಮದಲ್ಲಿ ಯುಜವೆಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರನ್ನು ಭಂಗಿ ಎಂದು ಕರೆದಿದ್ದರು. ಅಲ್ಲದೆ ಚಾಹಲ್ ಟಿಕ್ ಟಾಕ್ ಮಾಡಿದ್ದ ವಿಡಿಯೋ ಬಗ್ಗೆ ಜಾಸ್ತಿ ತಮಾಷೆಯಾಗಿಯೇ ಮಾತನಾಡಿದ್ದರು. ಆಗಲೇ ಸಾಮಾಜಿಕ ಜಾಲದ ತಾಣದಲ್ಲಿ ಯುವಿ ಕ್ಷಮೆ ಕೇಳಬೇಕು ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಇದೀಗ ಭಂಗಿ ಅನ್ನೋ ಪದ ಬಳಕೆಗೆ ದಲಿತ ಸಂಘಟನೆಗಳು ಹಾಗೂ ಹರ್ಯಾಣದ ವಿವಿಧ ಸಂಘಟನೆಗಳು ಯುವರಾಜ್ ಸಿಂಗ್ ಹೇಳಿಕೆಯನ್ನು ಖಂಡಿಸಿ ಹರಿಯಾಣದ ಪೊಲೀಸರಿಗೆ ದೂರು ಸಲ್ಲಿಸಿವೆ.
ರಜತ್ ಕಾಲ್ಸನ್ ಅನ್ನೋ ವಕೀಲರು ಹರಿಯಾಣದ ಹಿಸಾರ್ ನ ಹಂಸಿ ಎಂಬಲ್ಲಿ ದೂರು ನೀಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೇ ಯುವಿ ಕ್ಷಮೆ ಕೇಳಬೇಕು ಸುಮಾರು ಆಗ್ರಹಿಸಿದ್ದರು. ಆದ್ರೆ ಯುವಿ ಕ್ಯಾರೇ ಮಾಡಿಲ್ಲ. ಅದ್ರಲ್ಲೂ ದಲಿತ ವಿರೋಧಿ ಹೇಳಿಕೆ ಸರಿಯಲ್ಲ. ಇದು ಸಮುದಾಯದ ಭಾವನೆಗೆ ದಕ್ಕೆಯನ್ನುಂಟು ಮಾಡಿದೆ. ಯುವರಾಜ್ ತಕ್ಷವೇ ಕ್ಷಮೆ ಕೇಳಬೇಕು ಎಂದು ರಜತ್ ಕಾಲ್ಸನ್ ಹೇಳಿದ್ದಾರೆ.
ಹರಿಯಾಣದ ಹಿಸಾನ್ ಹಂಸಿ ಎಂಬ ಠಾಣೆಯಲ್ಲಿ ರಜತ್ ಕಾಲ್ಸನ್ ಎಂಬುವರು ಯುವರಾಜ್ ಸಿಂಗ್ ಮೇಲೆ ಜಾತಿ ನಿಂದನೆಯ ಆರೋಪದಡಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಲಿದ್ದಾರೆ. ಅಲ್ಲದೆ ಆರೋಪಕ್ಕೆ ಸೂಕ್ತ ಸಾಕ್ಷಿ ಮತ್ತು ದಾಖಲೆಗಳನ್ನು ನೀಡುವುದಾಗಿ ರಜತ್ ಹೇಳಿದ್ದಾರೆ. ಸಾಕ್ಷಾಧಾರಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿ ಎಸ್ಪಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ರೋಹಿತ್ ಶರ್ಮಾ ಮತ್ತು ಯುವರಾಜ್ ಸಿಂಗ್ ಅವರು ಯಜುವೇಂದ್ರ ಚಾಹಲ್ ತನ್ನ ಮನೆಯವರ ಜೊತೆ ಟಿಕ್ ಟಾಕ್ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹಾಕುತ್ತಿದ್ದರು. ಈ ವಿಡಿಯೋದಲ್ಲಿ ಚಾಹಲ್ ಕುಟುಂಬದೊಂದಿಗೆ ನೃತ್ಯ ಮಾಡುತ್ತಿದ್ದರು. ಆಗ ಚಾಹಲ್‍ಗೆ ಯುವರಾಜ್ ಸಿಂಗ್ ಮತ್ತು ರೋಹಿತ್ ಶರ್ಮಾ ತಮಾಷೆ ಮಾಡಿಕೊಂಡು ಮಾತನಾಡುತ್ತಿದ್ದರು. ಆದ್ರೆ ಆ ತಮಾಷೆ ಜಾತಿ ನಿಂದನೆಯವರೆಗೆ ಬಂದು ಬಿಟ್ಟಿದೆ.
ಸದಾ ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದ ಯುವರಾಜ್ ಸಿಂಗ್ ಈಗ ಮತ್ತೆ ವಿವಾದವೊಂದಕ್ಕೆ ಸಿಲುಕಿದ್ದಾರೆ.








