Yuvraj Singh | ಟೀಂ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ಸಿ ಪಂತ್ ಗೆ ಕೊಡಿ
ಟೀಂ ಇಂಡಿಯಾದ ಭವಿಷ್ಯದ ಟೆಸ್ಟ್ ನಾಯಕ ಯಾರು ಎಂಬ ವಿಚಾರದ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದು, ರಿಷಬ್ ಪಂತ್ ಅವರನ್ನ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ವಯಸ್ಸಿನ ಕಾರಣ ರೋಹಿತ್ ಶರ್ಮಾ ಹೆಚ್ಚು ಕಾಲ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕರಾಗಿ ಇರಲು ಸಾಧ್ಯವಿಲ್ಲ.
ಹೀಗಾಗಿ ಪಂತ್ ಈಗಲೇ ಉಪನಾಯಕನ ಪಟ್ಟ ನೀಡಬೇಕು ಎಂದು ಯುವಿ ವಾದಿಸಿದ್ದಾರೆ.
ವಿಕೆಟ್ ಕೀಪರ್‌ಗಳು ವಿಕೆಟ್‌ಗಳ ಹಿಂದೆ ನಿಂತು ತಂಡವನ್ನು ಅದ್ಭುತವಾಗಿ ಮುನ್ನಡೆಸಬಲ್ಲರು ಮತ್ತು ಅವರು ಮೈದಾನದಲ್ಲಿ ಅತ್ಯುತ್ತಮ ಪ್ರೇಕ್ಷಕರಾಗಿರುತ್ತಾರೆ.
ಇದಕ್ಕೆ ಧೋನಿ ಪರಿಪೂರ್ಣ ಉದಾಹರಣೆ, ಇಂತಹ ಗುಣಗಳು ಪಂತ್ ನಲ್ಲಿವೆ ಎಂದು ಯುವಿ ಹೇಳಿದ್ದಾರೆ.
ಆದರೆ, ಪಂತ್ ಗೆ ಅಧಿಕಾರ ಹಸ್ತಾಂತರಿಸಿದ ತಕ್ಷಣ ಪವಾಡಗಳನ್ನು ನಿರೀಕ್ಷಿಸಬೇಡಿ, ಅವರಿಗೆ ಒಂದು ವರ್ಷ ಕಾಲಾವಕಾಶ ನೀಡಬೇಕು.
ಈ ಸಮಯದಲ್ಲಿ ಬಿಸಿಸಿಐ ಪಂತ್ ಬೆಂಬಲಕ್ಕೆ ನಿಲ್ಲಬೇಕು ಎಂದು ಸಲಹೆ ನೀಡಿದರು.
ಪಂತ್ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯುವಿ, ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಯಶಸ್ವಿ ನಾಯಕರೂ ಆರಂಭದಲ್ಲಿ ಕಷ್ಟಪಟ್ಟಿದ್ದಾರೆ.ಕಾಲಾನಂತರದಲ್ಲಿ ಪಂತ್ ಕೂಡ ಪ್ರಬುದ್ಧರಾಗುತ್ತಾರೆ ಎಂದು ಹೇಳಿದರು.
yuvraj-singh-rishabh-pant-should-be-made-team-india-test-captain