Yuzvendra Chahal | ಚಹಾಲ್ ಚರಿತ್ರೆ ಸೃಷ್ಠಿಸಲು ಇನ್ನೊಂದೆ ಹೆಜ್ಜೆ ಬಾಕಿ
ಟೀಂ ಇಂಡಿಯಾದನ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್, ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಪರೂಪದ ಮೈಲುಗಲ್ಲು ಮುಟ್ಟಲು ಇನ್ನೊಂದು ಹೆಜ್ಜೆ ದೂರದಲ್ಲಿದ್ದಾರೆ.
ವಿಂಡೀಸ್ ವಿರುದ್ಧ ಪ್ರಾರಂಭವಾಗಲಿರುವ ಏಕದಿನ ಸಿರೀಸ್ ನಲ್ಲಿ ಇನ್ನೊಂದು ವಿಕೆಟ್ ಪಡೆದರೇ, ಈ ಫಾರ್ಮೆಟ್ ನಲ್ಲಿ 100 ವಿಕೆಟ್ ಪಡೆದ ಭಾರತದ 23ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ. yuzvendra-chahal-1-wicket-short-100-wickets-milestone in odi
ಈ ಪಟ್ಟಿಯಲ್ಲಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ 269 ಮ್ಯಾಚ್ ಗಳಲ್ಲಿ 334 ವಿಕೆಟ್ ಪಡೆಯುವುದರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಇಲ್ಲಿಯವರೆಗೂ ಏಕದಿನ ಕ್ರಿಕೆಟ್ ನಲ್ಲಿ 59 ಪಂದ್ಯಗಳನ್ನಾಡಿರುವ ಚಹಾಲ್, 5.19 ಸರಾಸರಿಯಲ್ಲಿ 99 ವಿಕೆಟ್ ಪಡೆದಿದ್ದಾರೆ.
ಇದರಲ್ಲಿ 2 ಬಾರಿ 5 ವಿಕೆಟ್ ಗೊಚ್ಚಲು ಪಡೆದಿದ್ದಾರೆ. 2 ಬಾರಿ ನಾಲ್ಕು ವಿಕೆಟ್ ಪಡೆದಿರುವ ಘನತೆಯೊಂದಿದ್ದಾರೆ. 42 ರನ್ ಕೊಟ್ಟು 6 ವಿಕೆಟ್ ಪಡೆದಿರುವುದು ಚಹಾಲ್ ಅವರ ಉತ್ತಮ ಸಾಧನೆಯಾಗಿದೆ.
ಅಂದಹಾಗೆ ಬ್ಯಾಡ್ ಫಾರ್ಮ್ ಗೆ ಸಿಲುಕಿದ್ದ ಚಹಾಲ್, ತಂಡಕ್ಕೆ ಬಂದೋಗುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಚಹಾಲ್ ಗೆ ಚಾನ್ಸ್ ಸಿಕ್ಕಿದ್ರೂ, ಮೂರು ಪಂದ್ಯಗಳಲ್ಲಿ 2 ವಿಕೆಟ್ ಮಾತ್ರ ಪಡೆದರು. ಆದ್ರೂ ಅವರನ್ನು ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಆಯ್ಕೆ ಮಾಡಲಾಗಿದೆ.









