ಯಜುವೇಂದ್ರ ಚಾಹಲ್ ಮತ್ತು ಪತ್ನಿ ಧನಶ್ರೀ ನಡುವೆ ಬಿರುಕು …!!! ಸರ್ ನೇಮ್ ತೆಗೆದ ಧನಶ್ರೀ
ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನವುಂತಹ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಚಾಹಲ್ ಹೆಸರನ್ನ ತೆಗೆದು ಹಾಕಿರುವುದು ಇಷ್ಟೆಕ್ಕೆಲ್ಲ ಕಾರಣ. ದಂಪತಿಗಳ ನಡುವೆ ಎಲ್ಲವೂ ಸರಿ ಹೊಂದುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮದುವೆ ನಂತರ ಧನಶ್ರೀ ವರ್ಮಾ ತಮ್ಮ ಹೆಸರಿನೊಂದಿಗೆ ಯುಜ್ವೇಂದ್ರ ಎಂಬ ಉಪನಾಮವನ್ನು ಸೇರಿಸಿದ್ದರು. ಆದರೀಗ ಉಪನಾಮವನ್ನ ತೆಗೆದಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದರೆ, ಯುಜುವೇಂದ್ರ ಜೊತೆ ಇರುವ ಫೋಟೋಗಳನ್ನು ಧನಶ್ರೀ ತಮ್ಮ ಖಾತೆಯಿಂದ ಇನ್ನೂ ತೆಗೆದು ಹಾಕಿಲ್ಲ.

ಸ್ಟೇಟಸ್ ಹಂಚಿಕೊಂಡ ಚಾಹಲ್
ಧನಶ್ರೀ ವರ್ಮಾ ಹೆಸರು ತೆಗೆದ ತಕ್ಷಣ ಚಾಹಲ್ ಕೂಡ ಒಂದು ಪೋಟೋವನ್ನ ಸ್ಟೇಟಸ್ ಅಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ‘ನ್ಯೂ ಲೈಫ್ ಲೋಡಿಂಗ್’ ಎಂದು ಬರೆಯಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಪ್ರೀತಿ ಮತ್ತು ನಗುವಿನ ಕ್ಷಣಗಳನ್ನ ಹಂಚಿಕೊಳ್ಳುವ ಈ ಜೋಡಿಯ ಇಂತಹ ಪ್ರತಿಕ್ರಿಯೆ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಆನ್ಲೈನ್ ಮೂಲಕ ಆರಂಭವಾಗಿದ್ದ ಸ್ನೇಹ
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಆನ್ಲೈನ್ ಮೂಲಕ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ಚಾಹಲ್ ಡ್ಯಾನ್ಸ್ ಕಲಿಯಲು ಧನಶ್ರೀ ಅವರ ಕ್ಲಾಸ್ ಗೆ ಸೇರಿಕೊಂಡಿದ್ದರು. ಇಲ್ಲಿಂದ ಅವರಿಬ್ಬರ ನಡುವೆ ಪ್ರೀತಿ ಶರುವಾಯಿತು. ಕೇವಲ 3 ತಿಂಗಳು ರಿಲೇಷನ್ಶಿಪ್ ನಲ್ಲಿದ್ದ ಜೋಡಿ ಆನಂತರ ಮದುವೆಯಾಗಲು ನಿರ್ಧರಿಸಿತು. ನಂತರ, ಇಬ್ಬರೂ 22 ಡಿಸೆಂಬರ್ 2020 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗಳು ತಮ್ಮ ಕ್ಯೂಟ್ನೆಸ್ ಮತ್ತು ರೋಮ್ಯಾಂಟಿಕ್ ಫೋಟೋಗಳಿಂದ ಹಲವು ಭಾರಿ ಚರ್ಚೆಯಲ್ಲಿದ್ದರು.








