ಸ್ಪಿನ್ನರ್ ಚಾಹಲ್ ಗೆ ಕಿರುಕುಳ ಕೊಟ್ಟಿದ್ದ ಆಟಗಾರರ ಹೆಸರು ರಿವೀಲ್
ಭಾರತ ತಂಡದ ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ ಅವರ ಮೇಲೆ ನಡೆದಿತ್ತು ಎನ್ನಲಾದ ದೈಹಿಕ ಹಲ್ಲೆಗೆ ಸಂಬಂಧಿಸಿದ ಘಟನೆಗೆ ಕಾರಣ ಯಾರು ಎನ್ನುವುದು ಈಗ ರಿವೀಲ್ ಆಗಿದೆ.
ನ್ಯೂಜಿಲ್ಯಾಂಡ ನ ಮಾಜಿ ವೇಗದ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕುಡಿದ ಮತ್ತಿನಲ್ಲಿ ಚಾಹಲ್ ಗೆ ದೈಹಿಕವಾಗಿ ಕಿರುಕುಳ ಕೊಟ್ಟಿದ್ದರು ಎನ್ನಲಾಗಿದೆ. ಫ್ರಾಂಕ್ಲಿನ್ 2011 ರಿಂದ 2013 ರವರೆಗೆ ಮುಂಬೈ ಇಂಡಿಯನ್ಸ್ನ ಭಾಗವಾಗಿದ್ದರು.
ನ್ಯೂಜಿಲ್ಯಾಂಡ ನ ಮಾಜಿ ವೇಗದ ಬೌಲರ್ ಜೇಮ್ಸ್ ಫ್ರಾಂಕ್ಲಿನ್ ಪ್ರಸ್ತುತ ಇಂಗ್ಲೀಷ್ ಕೌಂಟಿ ತಂಡ ಡರ್ಹಾಮ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜ್ವೇಂದ್ರ ಚಾಹಲ್ ದೈಹಿಕ ಕಿರುಕುಳದ ಆರೋಪದ ನಂತರ ಇಂಗ್ಲಿಷ್ ಕೌಂಟಿ ತಂಡ ಪ್ರಾಂಕ್ಲಿನ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಫ್ರಾಂಕ್ಲಿನ್ ಅವರ ಜೊತೆ ಖಾಸಗಿಯಾಗಿ ಮಾತನಾಡುವುದಾಗಿ ಕ್ಲಬ್ ಹೇಳಿದೆ. ನಮ್ಮ ಕೋಚಿಂಗ್ ಸಿಬ್ಬಂದಿಯ ಬಗ್ಗೆ ಕೇಳಿ ಬಂದ ವಿಚಾರ ನಮ್ಮನ್ನ ತಲುಪಿದೆ ಈ ಬಗ್ಗೆ ಸತ್ಯವನ್ನ ಖಚಿತ ಪಡಿಸಿಕೊಳ್ಳಲು ಖಾಸಗಿಯಾಗಿ ಅವರೊಂದಿಗೆ ಮಾತನಾಡುತ್ತೇವೆ ಎಂದು ಕ್ಲಬ್ ಹೇಳಿದೆ.
2011 ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಲೀಗ್ ಗೆದ್ದು, ಸಂಭ್ರಮಿಸುತ್ತಿದ್ದಾಗ ಚಹಾಲ್ ಅವರನ್ನ ಸಹ ಆಟಗಾರರಾದ ಫ್ರಾಂಕ್ಲಿನ್ ಮತ್ತು ಆಸ್ಟ್ರೇಲಿಯಾದ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಕಟ್ಟಿಹಾಕಿದರು ಎಂದು ಆರೋಪಿಸಲಾಗಿದೆ.
ನನ್ನ ಬಾಯಿಯನ್ನು ಟೇಪ್ನಿಂದ ಮುಚ್ಚಿ ರಾತ್ರಿ ರೂಮ್ ನಲ್ಲಿ ಒಬ್ಬಂಟಿಯಾಗಿ ಕೂಡಿಹಾಕಿದ್ರು ಎಂದು ಚಹಾಲ್ ಆರೋಪಿಸಿದ್ದಾರೆ. ‘ಇದು 2011ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಲೀಗ್ ಗೆದ್ದ ಘಟನೆ. ನಾವು ಚೆನ್ನೈನಲ್ಲಿದ್ದೆವು. ಸೈಮಂಡ್ಸ್ ತುಂಬಾ ‘ಫ್ರೂಟ್ ಜ್ಯೂಸ್’ ಕುಡಿದರು. ಅವರು ಏನು ಯೋಚಿಸುತ್ತಿದ್ದರೆಂಬುದು ನನಗೆ ತಿಳಿದಿಲ್ಲ, ಆದರೆ ಆಂಡ್ರ್ಯೂ ಮತ್ತು ಜೇಮ್ಸ್ ನನ್ನ ಕೈ ಮತ್ತು ಕಾಲುಗಳನ್ನು ಒಟ್ಟಿಗೆ ಜೋಡಿಸಿ ಕಟ್ಟಿಹಾಕಿ ಇದನ್ನ ತೆರೆಯಿರಿ ಎಂದು ಹೇಳಿದರು. ಅವರು ಕುಡಿದ ಅಮಲಿನಲ್ಲಿ ನನ್ನ ಬಾಯಿಗೆ ಟೇಪ್ ಬಿಗಿದುಬಿಟ್ಟರು. ಪಾರ್ಟಿ ಮಾಡುತ್ತ ನನ್ನನ್ನು ಸಂಪೂರ್ಣವಾಗಿ ಮರೆತುಬಿಟ್ಟರು. ಬೆಳಿಗ್ಗೆ ಯಾರೋ ರೂಮ್ ಕ್ಲೀನ್ ಮಾಡುವವರು ಬಂದು ನನ್ನನ್ನು ನೋಡಿ ಇನ್ನು ಕೆಲವರನ್ನ ಕರೆದು ನನ್ನನ್ನು ಬಿಡಿಸಿದರು ಎಂದು ಚಾಹಲ್ ಹೇಳಿಕೊಂಡಿದ್ದರು.