ಆಫ್ರಿಕಾ ನೆಲದಲ್ಲಿ ಚಾಹಲ್ ದಾಖಲೆ.. ಆ ಸಾಧನೆ ಮಾಡಿದ ಮೊದಲ ಬೌಲರ್
ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ ಆಫ್ರಿಕಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದೆ.
ಈ ಇನ್ನಿಂಗ್ಸ್ ನ 36.5 ಓವರ್ ನಲ್ಲಿ ಯಜುವೇಂದ್ರ ಚಹಾಲ್, ವ್ಯಾನ್ ಡೆರ್ ಡಸ್ಸೆನ್ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಈ ವಿಕೆಟ್ ಪಡೆಯೋದಕ್ಕೂ ಮುನ್ನಾ ಚಾಹಲ್ ಆಫ್ರಿಕಾ ನೆಲದಲ್ಲಿ 17 ವಿಕೆಟ್ ಪಡೆದಿದ್ದು, ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದರು.
ಇದೀಗ ವ್ಯಾಬ್ ಡೆರ್ ಡಸ್ಸೆನ್ ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಪರ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅದೇ ರೀತಿ ಈ ಪಂದ್ಯದಲ್ಲಿ ಇನ್ನೊಂದು ವಿಕೆಟ್ ಪಡೆದರೆ 100 ವಿಕೆಟ್ ಕ್ಲಬ್ ಸೇರಲಿದ್ದಾರೆ.









