ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರ ತೀವ್ರ ಅನಾರೋಗ್ಯದ ಸುದ್ದಿ ಸಂಗೀತ ಲೋಕದಲ್ಲಿ ತಲ್ಲಣ ಮೂಡಿಸಿದೆ. 73 ವರ್ಷದ ಜಾಕೀರ್ ಅವರು ಸದ್ಯ ಸ್ಯಾನ್ ಫ್ರಾನ್ಸಿಸ್ಕೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೃದಯ ಸಂಬಂಧಿತ ತೊಂದರೆಗಳಿಂದ ಜಾಕೀರ್ ಹುಸೇನ್ ಬಳಲುತ್ತಿದ್ದು, ಸ್ನೇಹಿತ ಮತ್ತು ಸಹಸಂಗೀತಕಾರ ರಾಕೇಶ್ ಚೌರಾಸಿಯಾ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ಜಾಕೀರ್ ಹುಸೇನ್ ಅವರ ಆರೋಗ್ಯಕ್ಕಾಗಿ ವಿಶ್ವದಾದ್ಯಂತ ಪ್ರಾರ್ಥನೆಗಳು ಹರಿದುಬರುತ್ತಿವೆ.
ಅವರ ಕುಟುಂಬ, ಸ್ನೇಹಿತರು ಮತ್ತು ಶಿಷ್ಯ ಸಮುದಾಯ ಅವರು ಶೀಘ್ರವೇ ಗುಣಮುಖರಾಗಲೆಂದು ಆಶಿಸುತ್ತಿದ್ದಾರೆ.