ಬೆಂಗಳೂರು: ಇತ್ತೀಚೆಗೆ ಸಾಧಿಕ್ ನಗರದಲ್ಲಿ ಆಶಾಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಾಗ ಘಟನೆಯನ್ನು ಸಮರ್ಥನೆ ಮಾಡಿಕೊಂಡಿದ್ದ ಶಾಸಕ ಜಮೀರ್ ಖಾನ್, ಪಾದರಾಯನಪುರ ಘಟನೆ ವಿಚಾರದಲ್ಲೂ ಅದೇ ರಾಗ ಹಾಡಿದ್ದಾರೆ.
ನಿನ್ನೆ ಪಾದರಾಯನಪುರದಲ್ಲಿ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, ಹಗಲು ಹೋಗಿದ್ದರೆ ಹೀಗೆ ಆಗ್ತಾ ಇರಲಿಲ್ಲ, ರಾತ್ರಿ ಹೋಗಿದ್ದಕ್ಕೇ ಹೀಗೆ ಆಗಿರೋದು ಎಂದು ಘಟನೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಅವರು ಅನಕ್ಷರಸ್ಥರು, ಕೂಲಿ-ಮಜೂರಿ ಮಾಡೋರು, ಆಟೋ ಓಡಿಸೋರು..ಅವರಿಗೆ ಮೊದಲೇ ಹೇಳಿ ಹೋಗದೇ ಏಕಾಏಕಿ ಹೋಗಿದ್ದಕ್ಕೆ ಹೀಗೆ ಆಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಯಾರ್ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದೂ ಸಹ ಅವರ ಹೇಳಿದ್ದಾರೆ.