ಬೆಂಗಳೂರು : ಶಾಸಕ ಜಮೀರ್ ಅಹಮದ್ ಮೊದಲು ಯಡಿಯೂರಪ್ಪ ಮನೆ ಹತ್ತಿರ ಹೋಗಿ ವಾಚ್ ಮ್ಯಾನ್ ಆಗಲಿ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ರ ‘ರೋಷನ್ ಬೇಗ್ ಬಿಜೆಪಿ ಕಚೇರಿಯಲ್ಲಿ ಕಸಗುಡಿಸಿದರೆ 2023ರಲ್ಲಿ ಚುನಾವಣಾ ಟಿಕೆಟ್ ಸಿಗಬಹುದು’ ಎಂಬ ಟೀಕೆಗೆ ಮಾಜಿ ಶಾಸಕ ರೋಷನ್ ಬೇಗ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಗರದ ಡಿಜೆ ಹಳ್ಳಿ ಗಲಭೆ ಬಗ್ಗೆ ಮಾತನಾಡಿದ ಅವರು, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ನವರ ಕೈವಾಡ ಇದೆ ಎಂದು ಆರೋಪಿಸಿದರು. ಗಲಭೆಯಲ್ಲಿ ಕೆಲವರು ಅಮಾಯಕರು ಇರಬಹುದು. ಅಮಾಯಕರನ್ನು ಬಿಡಿ ಅಂತ ನಾನೇ ಹೇಳಿದ್ದೇನೆ. ಆದರೆ ಮೌಲಾನಾಗಳು ಗೋರಿ ಪಾಳ್ಯದಿಂದ ಯಾಕೆ ಇಲ್ಲಿಗೆ ಬರಬೇಕಿತ್ತು? ಟಿಪ್ಪು ನಗರದಿಂದ ಇಲ್ಲಿಗೆ ಗಲಾಟೆಗೆ ಹೊರಗಡೆಯಿಂದ ಯಾಕೆ ಬರಬೇಕಿತ್ತು ಎಂದು ಪ್ರಶ್ನಿಸಿದರು. ನಾನು ಯಾವುದೇ ಎಸ್ ಡಿಪಿಐ ನ್ನು ಬೆಂಬಲಿಸಿಲ್ಲ. ನಾನು ಹೋರಾಟ ಮಾಡಿಕೊಂಡು ಬಂದವನು. ಹಿಂದೆ ಒಂದು ಗಲಾಟೆಯಲ್ಲಿ ರಮೇಶ್ ಕುಮಾರ್, ಸುದರ್ಶನ್, ಮಹದೇವಪ್ಪ ನನ್ನ ಜೀವ ಉಳಿಸಿದಾರೆ ಎಂದರು.
ಇದೇ ವೇಳೆ ಜಮೀರ್ ವಿರುದ್ಧ ಕಿಡಿಕಾರಿದ ಬೇಗ್, ಜಮೀರ್ ಮೊದ್ಲು ಹೋಗಿ ಬಿಎಸ್ ವೈ ಮನೆ ಮುಂದೆ ವಾಚ್ ಮ್ಯಾನ್ ಆಗಲಿ ನಾನು ಬೇರೆಯವರಿಂದ ಪಾಠ ಕಲಿಯಬೇಕಿಲ್ಲ. ನಾನು ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿಲ್ಲ ಎಂದರು.








