Zika Virus : ರಾಜ್ಯದಲ್ಲಿ ಮೊದಲ ಝಿಕಾ ಭೀತಿ… 5 ವರ್ಷದ ಬಾಲಕಿಯಲ್ಲಿ ಡೇಂಜರಸ್ ವೈರಸ್ ಪತ್ತೆ..
ರಾಜ್ಯದಲ್ಲಿ ಮೊದಲ ಝಿಕಾ ಭೀತಿ…!!
ಜ್ವರ , ತಲೆನೋವು , ಸಂಧು ನೋವು
ಮೈ ಮೇಲೆ ಗುಳ್ಳೆಗಳು , ಕೆಂಪು ಕಣ್ಣು
ಮಾಂಸ ಖಂಡದಲ್ಲಿ ನೋವು , ಝಿಕಾ ಲಕ್ಷಣಗಳು
5 ವರ್ಷದ ಬಾಲಕಿಯಲ್ಲಿ ಝಿಕಾ ಸೋಂಕು
ಒಂದೆಡೆ ಕೊರೊನಾ ಹಾವಳಿ ಸಂಪೂರ್ಣ ಮುಗಿದೆ ಹೋಗಿದೆ ಎನಿಸುವಂತೆ ಸಹಜ ಸ್ಥಿತಿಗೆ ವಿಶ್ವದ ಜನರು ಮರಳಿದ್ದಾರೆ.. ಆದ್ರೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ..
ಅದ್ರಲ್ಲೂ ರಾಜ್ಯದ ಜನರಲ್ಲಿ ಈ ಝಿಕಾ ಆತಂಕ ಮನೆ ಮಾಡಿದೆ..
ಹೌದು..! ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದೆ..
ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿ ಕೋಳಿ ಕ್ಯಾಂಪ್ ನಲ್ಲಿ 5 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ..
ಪುಣೆ ವೈರಾಲಜಿ ಲ್ಯಾಬ್ ವರದಿಯಲ್ಲಿ ಈ ವೈರಸ್ ತಗುಲಿರುವ ಬಗ್ಗೆ ಖಚಿತವಾಗಿದೆ..
ಇನ್ನೂ ಸೋಂಕು ದೃಢವಾದ ಮಗುವಿನ ಪ್ರಯಾಣ ಇತಿಹಾಸ ತಿಳಿದುಬಂದಿಲ್ಲ..
ಹೀಗಾಗಿ ರಾಯಚೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ..
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಮಾತನಾಡುತ್ತಾ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ..
ಬಾಲಕಿಯ ಮನೆಗೆ ಆರೋಗ್ಯಾಧಿಕಾರಿಗಳು ಭೇ2ಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..
ಔಷಧಿ ಸಿಂಪಡಿಸಿ ಬಾಲಕಿಯ ಮನೆ ಬಳಿ ಇರುವವರ ದ್ರಹ ಸಂಗ್ರಹಿಸಲಾಗಿದೆ..
ಗ್ರಾಮದ ಗರ್ಭಿಣಿ ಮಹಿಳೆಯರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನೆ ಮಾಡಲಾಗಿದೆ..
Zika Virus , Raichuru girl tested positive for zika , saakshatv








