Zika Virus : ರಾಜ್ಯದಲ್ಲಿ ಝಿಕಾ ಭೀತಿ – ಸೋಂಕಿನ ಲಕ್ಷಣಗಳು , ಹರಡಲು ಕಾರಣ , ಎಷ್ಟು ಅಪಾಯಕಾರಿ – ಡೀಟೇಲ್ಸ್
ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದೆ..
ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿ ಕೋಳಿ ಕ್ಯಾಂಪ್ ನಲ್ಲಿ 5 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ..
ಪುಣೆ ವೈರಾಲಜಿ ಲ್ಯಾಬ್ ವರದಿಯಲ್ಲಿ ಈ ವೈರಸ್ ತಗುಲಿರುವ ಬಗ್ಗೆ ಖಚಿತವಾಗಿದೆ..
ಇನ್ನೂ ಸೋಂಕು ದೃಢವಾದ ಮಗುವಿನ ಪ್ರಯಾಣ ಇತಿಹಾಸ ತಿಳಿದುಬಂದಿಲ್ಲ..
ಹೀಗಾಗಿ ರಾಯಚೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ..
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಮಾತನಾಡುತ್ತಾ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ..
ಝಿಕಾ ವೈರಸ್ ತುಂಬಾ ಡೇಂಜರಸ್ ಎನ್ನಲಾಗ್ತಿದೆ..
ಮೊದಲಿಗೆ ಇದರ ಲಕ್ಷಣಗಳು ಹೀಗಿವೆ..
ಜ್ವರ , ಸಂಧು ನೊವು , ತಲೆ ನೋವು , ಮಾಂಸ ಖಂಡದಲ್ಲಿ ನೋವು , ಕಣ್ಣು ಕೆಂಪಾಗುವುದು , ಮೈ ಮೇಲೆ ಗುಳ್ಳೆಗಳು..
ಝಿಕಾ ಬಹಳವೇ ಅಪಾಯಕಾರಿ ವೈರಸ್ ಎನ್ನಲಾಗ್ತಿದೆ..
ಒಂದೊಮ್ಮೆ ಇದು ಗರ್ಭಿಣಿಯರಿಗೆ ತಗುಲಿದರೆ , ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗ್ತಿದೆ..
ಹುಟ್ಟುವ ಮಗುವಿನ ತಲೆ ಚಿಕ್ಕದಾಗಿರುತ್ತದೆ..
ಅವಧಿ ಪೂರ್ವ ಹೆರಿಗೆ ಸಾಧ್ಯತೆ ಅಥವ , ಗರ್ಭಪಾತದ ಸಾಧ್ಯತೆಯೂ ಇರುತ್ತದೆ ಎನ್ನಲಾಗಿದೆ..
ಏಡೀಸ್ ಸೊಳ್ಳೆಗಳಿಂದ ಝಿಕಾ
ಏಡೀಸ್ ಎಂಬ ಸೊಳ್ಳೆಗಳಿಂದ ಈ ಝಿಕಾ ವೈರಸ್ ಹರಡುತ್ತಿದೆ..
ಹಗಲು ಹೊತ್ತಿನಲ್ಲೂ ಈ ಸೊಳ್ಳೆಗಳು ಕಚ್ಚುತ್ತವೆ..
ಸೊಳ್ಳೆಗಳಿಂದ ಮಾತ್ರವೇ ಝಿಕಾ ಹರಡುವುದಿಲ್ಲ..!
ಇನ್ನೂ ಝಿಕಾ ವೈರಸ್ ಕೇವಲ ಸೊಳ್ಳೆಗಳಿಂಳ ಕಡಿತದಿಂದ ಮಾತ್ರವೇ ಹರಡುವುದಿಲ್ಲ.. ಸುರಕ್ಷಿತ ಲೈಂಗಿಕತೆ , ರಕ್ತದ ವರ್ಗಾವಣೆಯಿಂದಲೂ ಹರಡುಬಹುದು ಎನ್ನಲಾಗುತ್ತದೆ..
Zika Virus, symptoms , updates , saakshatv ,








