ಜೋಹಾನ್ಸ್ಬರ್ಗ್ : ಕಪ್ಪು ಜನರ ಸೂರ್ಯ, ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಪುತ್ರಿ ಜಿಂದಜೀ ನಿಧನರಾಗಿದ್ದಾರೆ. 59 ವರ್ಷದ ಜಿಂದಜೀ ಜೋಹಾನ್ಸ್ ಬರ್ಗ್ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಕೆ ಸದ್ಯ ಡೆನ್‌ಮಾರ್ಕ್ನ ರಾಯಭಾರಿಯಾಗಿದ್ದಳು.
ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಜಿಂದಜೀ ಅವರು ನೆಲ್ಸನ್ ಮಂಡೇಲಾ ಅವರ ಆರನೇ ಪುತ್ರಿಯಾಗಿದ್ದಾರೆ. ಇವರು ಮಂಡೇಲಾ ಅವರ ಎರಡನೇ ಹೆಂಡತಿ ಮಾಮಾ ವಿನ್ನಿ ಮಂಡೇಲಾ ಅವರ ಮಗಳಾಗಿದ್ದಾರೆ. ಆದ್ರೆ ಇವರು 1992ರಲ್ಲಿ ದೂರವಾಗಿದ್ದರು.








