ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ZOMBIE ಸಿನಿಮಾ..!
ಭಾರತದಲ್ಲೇ ಮೊದಲ ಸೂಪರ್ ವುಮೆನ್ ಸಿನಿಮಾ ಮಾಡಿ ಎಲ್ಲರ ಗಮನ ಸೆಳೆದಿದ್ದ ‘ಆನಾ’ ಸಿನಿಮಾದಲ್ಲಿ ಕೆಲಸ ಮಾಡಿರುವ ಆನಂದ್ ರಾಜ್ ಅವರ ನಿರ್ದೇಶನದಲ್ಲಿ ಇದೀಗ ಪ್ರೆಶ್ ಕಾನ್ಸೆಪ್ಟ್ ನಲ್ಲಿ ಸಿನಿಮಾ ಒಂದು ಮೂಡಿಬರುತ್ತಿದೆ. ಹೊಸ ಸಿನಿಮಾಗೆ ಕಥೆ ಬರೆದಿರುವುದು ‘ಆನಾ’ ನಿರ್ದೇಶಕರಾದ ಮನೋಜ್ ಪಿ ನಡಲುಮನೆಯವರು.
ಅಂದ್ಹಾಗೆ ಇದೊಂದು ಝೋಂಬಿ ಸಿನಿಮಾವಾಗಿರಲಿದ್ದು, ಕನ್ನಡ ಇಂಡಸ್ಟ್ರಿಯಲ್ಲೇ ಮೊದಲ ಪ್ರಯತ್ನ. ಹೌದು…ಕನ್ನಡದ ಸಿನಿಮಾರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಝೋಂಬಿ ಕಾನ್ಸೆಪ್ಟ್ ತರುವುದಕ್ಕೆ ಸಿನಿಮಾತಂಡ ರೆಡಿಯಾಗಿದ್ದು, ಸಿನಿಮಾ ತುಂಬಾನೆ ರಿಚ್ ಆಗಿಯೇ ನಿರ್ಮಾಣವಾಗಲಿದೆ. ಆದ್ರೆ ಅಧಿಕರತವಾಗಿ ಯಾರು ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಇನ್ನೂವರೆಗೂ ಬಹಿರಂಗವಾಗಿಲ್ಲ.
‘ಆನಾ’ ಸಿನಿಮಾದ ಟೀಮ್ ಈ ಸಿನಿಮಾದಲ್ಲೂ ಕೆಲಸ ಮಾಡಲಿರುವುದು ವಿಶೇಷ.. ಇನ್ನೂ ಆನ ಸಿನಿಮಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸ್ಕೋತಿರೋ RSK ಈ ಸಿನಿಮಾದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ತಾರಾಬಳಗದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಈವರೆಗೂ ಸಹ ಲಭ್ಯವಾಗಿಲ್ಲ. ಅಂದುಕೊಂಡಂತೆ ಎಲ್ಲವೂ ಆದ್ರೆ ಸಿನಿಮಾ ಶೂಟಿಂಗ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಹೊಸ ವಿಭಿನ್ನ ಪ್ರಯತ್ನ, ಪ್ರಯೋಗ ಅಂತ ಹೇಳಬಹುದು. ಕಾರಣ ಈ ರೀತಿಯಾದ ಕಥೆ / ಸಿನಿಮಾ ಮೂಡಿಬರುತ್ತಿರುಬವುದು ನಿಜಕ್ಕೂ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲು..
ಝೋಂಬಿ…. ಈ ಹೆಸರು ಕೇಳ್ತಿದ್ದಂತೆ ಭಯಾನಕ ರಕ್ತ ಪಿಶಾಚಿಗಳಿರುವ ಬಾಲಿವುಡ್ ಸಿನಿಮಾಗಳು ನಮ್ಮ ಕಣ್ಮುಂದೆ ಬರುತ್ತವೆ. ವಿಕಾರ ರೂಪ ನಾರ್ಮಲ್ ಆಗಿರುವ ಮನುಷ್ಯರು ಹುಡುಕಾಡಿ ಅವರಿಗೆ ಕಚ್ಚಿ ರಕ್ತ ಹೀರಿ ಅವರನ್ನೂ ಝೋಂಬಿ ರೀತಿ ಮಾಡುವ, ಮತ್ತು ಭಯಾನಕ ಧ್ವನಿ, ವಾಕಿಂಗ್ ಸ್ಟೈಲ್ ನಿಂದ ಝೋಂಬಿ ಸೀರೀಸ್ ತುಂಬಾ ಜನರ ಫೇವರೇಟ್..
ಆದ್ರೆ ಇದುವರೆಗೂ ಝೋಂಬಿ ಕಾನ್ ಸೆಪ್ಟ್ ನ ಸಿನಿಮಾಗಳು ಭಾರತದ ನಾನಾ ಭಾಷೆಗಳಲ್ಲಿ ಬಂದಿದ್ದರೂ ಸಹ ಕನ್ನಡದಲ್ಲಿ ಯಾವುದೇ ಈ ರೀತಿಯಾದ ಸಿನಿಮಾ ತೆರೆಕಂಡಿರಲಿಲ್ಲ. ಆದ್ರೆ ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾರಂಗದ ಇತಿಹಾಸದಲ್ಲೇ ಮೊದಲ ಝೋಂಬಿ ಸಿನಿಮಾ ತಯಾರಾಗ್ತಿದೆ.