ಮಕ್ಕಳಿಗೆ ‘ಜೈಕೋವಿ-ಡಿ’ ಲಸಿಕೆ ತುರ್ತುಬಳಕೆಗೆ ಸನುಮೋದನೆ..!
ಇನ್ನೇನು ಕೊರೊನಾ 2ನೇ ಅಲೆ ತಗ್ಗಿತು ಆತಂಕ ಪಡೋ ಅಗತ್ಯ ಏನೂ ಇಲ್ಲ ಅಂತ ಜನರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ ಮತ್ತೆ ಕೋವಿಡ್ ಹಾವಳಿ ಹೆಚ್ಚಾಗತೊಡಗಿದೆ.. ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.
ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಷ್ಟೇ ಅಲ್ದೇ ಮಕ್ಕಳೇ ಟಾರ್ಗೆಟ್ ಅನ್ನೋ ವಿಚಾರ ಪೋಷಕರ ನಿದ್ದೆಗೆಡಿಸಿದೆ. ಮಕ್ಕಳಿಗೆ ಲಸಿಕೆ ಯಾವಾಗ ಲಭ್ಯವಾಗುತ್ತೆ ಎಂದು ಎದುರು ನೋಡ್ತಿದ್ದವರಿಗೆ ಇದೀಗ ಖುಷಿ ಸುದ್ದಿ ಸಿಕ್ಕಿದೆ.. 
ಹೌದು ಜೈಡಸ್ ಕ್ಯಾಡಿಲಾದ ಮೂರು-ಡೋಸ್ ಕರೊನಾ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರಿಗೆ ಬಳಸಲು, ಭಾರತದ ಡ್ರಗ್ ನಿಯಂತ್ರಕ ಸಮಿತಿ ಅನುಮೋದನೆ ನೀಡಿದೆ. ಇನ್ನೂ ಜೈಕೋವಿ-ಡಿ ಹೆಸರಿನ ಈ ಡಿಎನ್ಎ ಲಸಿಕೆಯು ಭಾರತದಲ್ಲಿ ಮಕ್ಕಳಿಗಾಗಿ ಲಭ್ಯವಾಗುತ್ತಿರುವ ಮೊದಲ ಕರೊನಾ ಲಸಿಕೆಯಾಗಿದೆ.
ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಕಂಪೆನಿ ಉತ್ಪಾದಿಸುತ್ತಿರುವ ಜೈಕೋವಿ-ಡಿ ಲಸಿಕೆಯನ್ನು ಎಲ್ಲಾ ವಯಸ್ಕರಿಗೆ ಮತ್ತು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ರಾಷ್ಟ್ರಾದ್ಯಂತ 28,000 ವಾಲೆಂಟಿಯರ್ ಗಳ ಮೇಲೆ ನಡೆಸಿದ ಟ್ರಯಲ್ ಗಳಲ್ಲಿ ಈ ಲಸಿಕೆಗೆ ಶೇ. 66.6 ಪರಿಣಾಮಕಾರಿಯಾಗಿದೆ ಎಂಬ ವಿಚಾರ ಕಂಡುಬಂದಿದೆ.
ಕ್ಯಾಡಿಲಾ ಕಂಪೆನಿಯು ವರ್ಷಕ್ಕೆ 100 ರಿಂದ 120 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಲಸಿಕೆಯ ಶೇಖರಣೆಯನ್ನು ಆರಂಭಿಸಿದೆ. ಇದು ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದ್ದು, ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದಿರುವ 6ನೇ ಕರೊನಾ ಲಸಿಕೆಯಾಗಿದೆ.








