ಶೀಘ್ರದಲ್ಲೇ ಬರಲಿದೆ ಸೂಜಿ-ರಹಿತ ಕೋವಿಡ್ ಲಸಿಕೆ..!
ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮಹಾಲಸಿಕೆ ಅಭಿಯಾನ ಶುರುವಾಗಿದೆ.. ಈ ನಡುವೆ ಕೆಲವೆಡೆ ಲಸಿಕೆ ಕೊರತೆಯೂ ಎದುರಾಗಿದ್ದು, ಲಸಿಕೆ ಅಭಿಯಾನಕ್ಕೆ ಬಲತುಂಬಲು ‘ಜೈಡಸ್’ನ ಕ್ಯಾಡಿಲ್ಲಾ ಸೂಜಿ-ರಹಿತ ಕೋವಿಡ್ ಲಸಿಕೆಗೆ ತುರ್ತು ಬಳಕೆ ಅನುಮತಿ (ಇಯುಎ) ಕೊಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಈ ಮೂಲಕ ಜೈಡಸ್‍ನ ಜೈಕೋವ್-ಡಿ ಲಸಿಕೆಯು ಭಾರತದಲ್ಲಿ ಕೋವಿಡ್ ವಿರುದ್ಧ ಬಳಸಲು ಲಭ್ಯವಿರುವ ಆರನೇ ಲಸಿಕೆಯಾಗಲಿದೆ. ಹೌದು ದೇಶೀಯ ಲಸಿಕೆಗಳಾದ ಕೋವ್ಯಾಕ್ಸಿನ್ , ಕೋವಿ ಶೀಲ್ಡ್, ರಷ್ಯಾದ ಸ್ಪಟ್ನಿಕ್ ವಿ, ಮೊಡರ್ನಾ, ಜಾನ್ಸನ್ ಅಂಡ್ ಜಾನ್ಸನ್ ನಂತರ ದೇಶದಲ್ಲಿ ಬಳಕೆಗೆ ಅನುಮತಿ ಪಡೆದ 6ನೇ ಲಸಿಕೆ ಇದಾಗಿದೆ.
ಇದು ಮೂರು ಡೋಸ್‍ಗಳ ಲಸಿಕೆಯಾಗಿದ್ದು, ವರ್ಷವೊಂದಕ್ಕೆ 10-12 ಕೋಟಿ ಲಸಿಕೆಗಳ ಉತ್ಪಾದನೆಗೆ ಕಂಪನಿ ಯೋಜನೆ ಹಾಕಿಕೊಂಡಿದೆ. ದೇಶಾದ್ಯಂತ 50ಕ್ಕೂ ಹೆಚ್ಚು ಪ್ರಯೋಗ ಕೇಂದ್ರಗಳಲ್ಲಿ ತನ್ನ ಲಸಿಕೆಯ ಪ್ರಯೋಗ ಮಾಡಲಾಗಿದೆ ಎಂದು ಜೈಡಸ್ ತಿಳಿಸಿದೆ.
ZyCoV-D ಈ ವಾರ ತುರ್ತು ಚಾಲನೆ ಪಡೆದುಕೊಳ್ಳುವ ಸಾಧ್ಯತೆಯಿದೆ. ZyCoV-D ಕಂಪನಿಯು ತನ್ನ ಲಸಿಕೆಯ ಬಗ್ಗೆ ವಿಶ್ಲೇಷಣೆ ನೀಡಿದ್ದು, ರೋಗಲಕ್ಷಣದ RT-PCR ಪಾಸಿಟಿವ್ ಪ್ರಕರಣಗಳ ವಿರುದ್ಧ 66.6 ಶೇಕಡಾ ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಹೇಳಿದೆ. 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ZyCoV-D ಸುರಕ್ಷಿತವಾಗಿದೆ ಎಂದು ಇದು DGCI ಗೆ ತಿಳಿಸಿದೆ.
ಇದು ಮೂರು-ಡೋಸ್, ಇಂಟ್ರಾಡರ್ಮಲ್ ಲಸಿಕೆಯಾಗಿದ್ದು ಇದನ್ನು ಫಾರ್ಮಾಜೆಟ್ ಸೂಜಿ-ಮುಕ್ತ ವ್ಯವಸ್ಥೆಯನ್ನು ಬಳಸಿ ಅನ್ವಯಿಸಲಾಗುತ್ತದೆ. ಇದನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬಹುದು ಆದರೆ ಕನಿಷ್ಠ ಮೂರು ತಿಂಗಳವರೆಗೆ 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉತ್ತಮ ಸ್ಥಿರತೆಯನ್ನು ತೋರಿಸಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 28,204 ಕೇಸ್ ಪತ್ತೆ
ಡಿಎನ್ಎ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಜೈಡಸ್ ಕ್ಯಾಡಿಲಾ 12 ರಿಂದ 18 ವರ್ಷದೊಳಗಿನವರ ಕ್ಲಿನಿಕಲ್ ಪ್ರಯೋಗವನ್ನು ಮುಗಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಶಾಸನಬದ್ಧ ಅನುಮತಿಗಳಿಗೆ ಒಳಪಟ್ಟು, 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಇದು ಮುಂದಿನ ದಿನಗಳಲ್ಲಿ ಲಭ್ಯವಿರಬಹುದು ಕಂಪನಿ ಹೇಳಿಕೊಂಡಿದೆ..








