ಮೂಲತಹ ಕನ್ನಡದ ನಟಿಯಾದ ಅನುಷ್ಕಾ ಶೆಟ್ಟಿ ತಮ್ಮ ನಟನೆ, ಸ್ವಭಾವ, ಗುಣ, ಅಂದಚೆಂದಕ್ಕಷ್ಟೇ ಹೆಸರು ಮಾಡಿಲ್ಲ.
ದಕ್ಷಿಣ ಭಾರತದ ಟಾಪ್ ನಟಿಯರ ಲಿಸ್ಟ್ ನಲ್ಲಿ ಅಗ್ರ ಸ್ಥಾನದಲ್ಲಿದ್ದರು, ಅವರ ಸೌಮ್ಯತೆ, ಸರಳತೆ ಎಂಥವರ ಮನ ಕರಗಿಸುತ್ತೆ.

ಮೃದು ಸ್ವಭಾವದ ಸ್ವೀಟಿ ಸಿಂಪಲ್ ನೆಸ್ ಗೆ ಅವರ ಅಭಿಮಾನಿಗಳು ಫಿದಾ…
ಸರಳತೆಗೆ ಹಿಡಿದ ಕೈಗನ್ನಡಿಯಂತಹ ಗಯುಣವಿರುವ ಅನುಷ್ಕಾ ಶೆಟ್ಟಿ ಇದಕ್ಕೆ ಮತ್ತೊಮ್ಮೆ ಉದಾಹರಣೆ ಕೊಟ್ಟಿದ್ದಾರೆ.
ಹೌದು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಅವರ ನಟನೆಯ ನಿಶ್ಯಬ್ದಂ ಚಿತ್ರ ಇತ್ತೀಚೆಗಷ್ಟೇ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ.
ಈ ನಡುವೆ #ಂsಞಂಟಿushಞಚಿ ಎಂಬ ಹ್ಯಾಷ್‌ಟ್ಯಾಗ್ ಆರಂಭಿಸಿದ್ದ ಅನುಷ್ಕಾ ಜನರ ಜೊತೆ ಸಂವಹನ ಆರಂಭಿಸಿದ್ದರು.

ಈ ಅಭಿಯಾನದಲ್ಲಿ ನಿಶ್ಯಬ್ದಂ ಸಿನಿಮಾ ನೋಡಿದ ಒಬ್ಬರು, ”ನನಗೆ ಕಥೆ ಇಷ್ಟ ಆಗಿಲ್ಲ, ಲಾಜಿಕ್ ಇಲ್ಲ” ಎಂದು ಅನುಷ್ಕಾಗೆ ಹೇಳಿದ್ದಾರೆ.
ಅದನ್ನು ವಿನಯದಿಂದ ಸ್ವೀಕರಿಸಿರುವ ಅನುಷ್ಕಾ ಶೆಟ್ಟಿ ”ಧನ್ಯವಾದಗಳು, ನಿಮ್ಮ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ” ಎಂದಿದ್ದಾರೆ.
ಅನುಷ್ಕಾ ನೀಡಿದ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಗಿಟಿವ್ ಕಾಮೆಂಟ್ ಬಂದರೂ ಅದನ್ನು ಸಮನಾಗಿ ಸ್ವೀಕರಿಸುವ ತಾಳ್ಮೆ ಇರುವ ಅನುಷ್ಕಾ ನಡೆ ಅಭಿಮಾನಿಗಳ ಮನಗೆದ್ದಿದೆ.








