ಪುತ್ತೂರು : ಇಂದು ಬೆಳ್ಳಂ ಬೆಳಿಗ್ಗೆ ಪುತ್ತೂರಿನ ಬೊಳುವಾರು ವೃತ್ತದಲ್ಲಿದ್ದ ಅಂಗಡಿಗಳಲ್ಲಿ ಏಕಾಏಕಿ ಬೆಂಕಿ (Fire) ಕಾಣಿಸಿಕೊಂಡಿದೆ. ಸತತ ಮೂರು ಗಂಟೆಗಳ ಕಾರ್ಯಚರಣೆ ಬಳಿಕ ಬೆಂಕಿ(Fire)ಯನ್ನು ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಗಿದೆ.
ಇಂದು ನಸುಕಿನ ಜಾವ ಬೊಳುವಾರು ವೃತ್ತದಲ್ಲಿ ಹ್ಯಾರಿಂಗ್ ಎಂಬ ಸಲೂನ್ ನಲ್ಲಿ ಬೆಂಕಿ ಹತ್ತಿಕೊಂಡಿದೆ. ಬಳಿಕ ಈ ಬೆಂಕಿಯ ಕೆನ್ನಾಲಿಗೆ ಅಲ್ಲಿದ್ದ ಬೇರೆ ಅಂಗಡಿಗಳಿಗೂ ವ್ಯಾಪಿಸಿದೆ.
ಇದನ್ನು ಗಮನಿಸಿದ ಹೈವೇ ಪೆಟ್ರೋಲ್ ಸಿಬ್ಬಂದಿ ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿಯಲ್ಲಿ ಉತ್ತಮ ಮಳೆ : ಪಾಳು ಬಿದ್ದ ಬೋರ್ ವೆಲ್ ನಿಂದ ಉಕ್ಕಿದ ನೀರು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಆದ್ರೆ ಆ ಹೊತ್ತಿಗಾಗಲೇ ಬೆಂಕಿ ಇತರೆ ಅಂಗಡಿಗಳಿಗೂ ವ್ಯಾಪ್ತಿಸಿದ ಕಾರಣ, ಪರಿಸ್ಥಿತಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೊನೆಗೆ ಸತತ ಮೂರು ಗಂಟೆಗಳ ಕಾರ್ಯಚರಣೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆಯಲ್ಲಿ ಅಪಾರ ಪ್ರಮಾಣ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









