ಸುಳ್ಯ : ಬರೋಬ್ಬರಿ ಆರು ಬಾರಿ ಸುಳ್ಯ ಜನರ ಆರ್ಶೀವಾದ ಪಡೆದು ವಿಧಾನಸೌಧ ಪ್ರದೇಶಿಸಿರುವ ಎಸ್.ಅಂಗಾರ ( BJP MLA S Angara) ಸಾಹೇಬ್ರೇ ಒಮ್ಮೆ ಸುಳ್ಯ ತಾಲೂಕಿನ ರಸ್ತೆಗಳ ಮೇಲೆ ಕಣ್ಣಾಯಿಸಿ. ನಿಮ್ಮನ್ನು ತಲೆ ಮೇಲೆ ಇಟ್ಟುಕೊಂಡು ಆರು ಬಾರಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟ ಜನರ ಮೂಲಭೂತ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡಿ.
ಯಾಕೆಂದ್ರೆ ಕ್ಷೇತ್ರದಲ್ಲಿ ಸೂಕ್ತ ರಸ್ತೆ,ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುತ್ತಿದ್ದಾರೆ. ತಾಲೂಕಿನಾದ್ಯಂತ ಅನೇಕ ಸಮಸ್ಯೆಗಳಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೇ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಬಂಡೆ ಸಂಸ್ಕೃತಿಗೆ ಆರ್.ಆರ್.ನಗರ ಜನ ಬೆಲೆ ಕೊಡಲ್ಲ : ಆರ್.ಅಶೋಕ್
ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಬಳ್ಪ ಹಾಗೂ ಗುತ್ತಿಗಾರು ಪಂಜ ರಸ್ತೆ ಹೆದಗೆಟ್ಟಿದೆ ಮಾತ್ರವಲ್ಲ ಜನರು ಮೊಗ್ರದ ಮತದಾನ ಕೇಂದ್ರಕ್ಕೆ ಈಗಲೂ ಕಟ್ಟಿಗೆಯಲ್ಲಿ ಕಟ್ಟಿಕೊಂಡಿರುವ ಸೇತುವೆ ಸಹಾಯದೊಂದಿಗೆ ಹಳ್ಳದಾಟುತ್ತಿದ್ದಾರೆ. ಇದು ಮೊಗ್ರ ಚುನಾವಣಾ ಬೂತ್ ದಾರಿಯಾಗಿದ್ದು, ಇದಕ್ಕೆ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದ್ರೆ ಈವರೆಗೂ ಸ್ಥಳೀಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆಕೆಡಿಸಿಕೊಂಡಿಲ್ಲ. ಬದಲಾಗಿ ಈ ಬಗ್ಗೆ ಪ್ರಶ್ನಿಸಿದರೇ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಒಟ್ಟಾರೆ ನಿಮ್ಮನ್ನು ತಮ್ಮ ಹೆಗಲ ಮೇಲೆ ಇಟ್ಟುಕೊಂಡು ವಿಧಾನಸೌಧಕ್ಕೆ ಕಳುಹಿಸಿಕೊಟ್ಟ ಜನರಿಗೆ ಸುವ್ಯವಸ್ಥೆ ದಾರಿಯಲ್ಲಾದರೂ ನಡೆಯುವಂತ ಭಾಗ್ಯ ನೀಡಿ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










