ಬೆಂಗಳೂರು : ಉದ್ಯಾನ ನಗರಿ ಬೆಂಗಳೂರು ಕಸ ತುಂಬಿ ಗಬ್ಬೆದ್ದು ನಾರುವಂತೆ ಮಾಡಿದ್ದೇ ಬಿಬಿಎಂಪಿಯ ಭ್ರಷ್ಟ ಆಡಳಿತದ ಹೆಗ್ಗಳಿಕೆ. ಬನ್ನಿ…ಪೆÇರಕೆ ಹಿಡಿದು ಬೆಂಗಳೂರಿನ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಕಸದ ಜೊತೆಗೆ ಗುಡಿಸಿ ಸ್ವಚ್ಚಗೊಳಿಸೋಣ ಎಂದು ಮಾಡೋಣ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. Let’s clean Bangalore” campaign
ಭಾನುವಾರ ಬೆಳಿಗ್ಗೆ ನಗರದ ಪುಲಕೇಶಿ ನಗರ, ಕೆಜಿ ಹಳ್ಳಿ, ಎಚ್‍ಬಿಆರ್ ಲೇಔಟ್‍ನಲ್ಲಿ ನಡೆದ “ಲೆಟ್ಸ್ ಕ್ಲೀನ್ ಬೆಂಗಳೂರು” ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತು ಕೊಳ್ಳುವ ತನಕ ಈ ಅಭಿಯಾನ ನಡೆಯುತ್ತಲೇ ಇರುತ್ತದೆ. ಅಲ್ಲಿಯ ತನಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿ ಭಾನುವಾರ ನಗರದ ಎಲ್ಲಾ ಭಾಗದ ರಸ್ತೆಗಳು, ಕಸ ಸುರಿಯುವ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಚಗೊಳಿಸುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 3 ವಾರಗಳಲ್ಲಿ ಕೋವಿಡ್ ಪ್ರಕರಣಗಳು 10 ಲಕ್ಷ ತಲುಪುವ ಸಾಧ್ಯತೆ
ಈ ಅಭಿಯಾನ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶ, ಆಟೋಗಳನ್ನು ಸ್ಯಾನಿಟೈಜ್ ಮಾಡಲಾಯಿತು. ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ನಗರದ 50 ಭಾಗಗಳಲ್ಲಿ ಪ್ರಾರಂಭವಾದ ಅಭಿಯಾನ ಸುಮಾರು 12.30 ರವರೆಗೆ ನಡೆಯಿತು. ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫರೀದುದ್ದೀನ್ ಷರೀಫ್ ಸೇರಿದಂತೆ ಎಲ್ಲಾ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳು, ಮಹಿಳಾ ಮುಖಂಡರುಗಳು ಭಾಗವಹಿಸಿದ್ದರು.
ಅಭಿಯಾನ ನಡೆದ ಸ್ಥಳಗಳು
ಕಾಡು ಮಲ್ಲೇಶ್ವರ ವಾರ್ಡ್, ರಾಜಾಜಿ ನಗರ, ಬಸವೇಶ್ವರ ನಗರ, ಮಾರುತಿ ಸೇವಾ ನಗರ, ಬಾಣಸವಾಡಿ ಮುಖ್ಯ ರಸ್ತೆ ಪೆಟ್ರೋಲ್ ಬಂಕ್ ಹತ್ತಿರ, ಶಾಂತಿ ನಗರ ನಂಜಾಂಭ ವೃತ್ತ, ಯಲಹಂಕ ಹೊಸ ಬಡಾವಣೆ, ಬಿಳಿಕೆಹಳ್ಳಿಯ ವಿಜಯಾ ಬ್ಯಾಂಕ್ ಕಾಲೋನಿ, ಕೋಡಿ ಚಿಕ್ಕೇನಹಳ್ಳಿ ಮುಖ್ಯ ರಸ್ತೆ, ಬೊಮ್ಮನಹಳ್ಳಿಯ ಲಕ್ಷ್ಮಿ ಲೇಔಟ್, ಗಾರೆ ಪಾಳ್ಳ ಮುಖ್ಯ ರಸ್ತೆ, ಹೊಂಗಸಂದ್ರ ಮುಖ್ಯ ರಸ್ತೆ, ಅಗ್ರಹಾರ, ಸರ್ವೀಸ್ ರಸ್ತೆ ಹತ್ತಿರದ ಹನುಮಾನ್ ದೇವಾಸ್ಥಾನ ಮತ್ತು 24 ನೇ ಮೇನ್, ದೇವರ ಚಿಕ್ಕೇನಹಳ್ಳಿ, ನೈಟಿಂಗೆಲ್ ಶಾಲೆ ಮತ್ತು ರಾಮನ ದೇವಸ್ಥಾನ, ಬಿಟಿಎಂ ಲೇಔಟ್, ಮೈಕೋ ಲೇಔಟ್, ಎನ್.ಎಸ್ ಪಾಳ್ಯ, ರಾಜೇಂದ್ರ ನಗರ, ಕೋರಂಮಗಲ 3ನೇ ಬ್ಲಾಕ್, ಡ್ರೈವಿಂಗ ಹಳ್ಳಿ, ಟಿಂಬರ್ ಲೈನ್, ಜಯನಗರ ವಿಧಾನ ಸಭಾ ಕ್ಷೇತ್ರದ ಗುರಪ್ಪನ ಪಾಳ್ಳ ವಾರ್ಡ್, ನಾಗಾವಾರ ವಾರ್ಡ್ ಸಂಖ್ಯೆ 28, ಗೋವಿಂದ ಪುರ/ ಬೈರಪ್ಪ ಲೇಔಟ್ ಸರ್ಕಾರಿ ಶಾಲೆ ಬಳಿ ಅಭಿಯಾನ ಯಶಸ್ವಿಯಾಗಿ ನಡೆಯಿತು. ಸುಬ್ರಹ್ಮಣ್ಯ ನಗರ ವಾರ್ಡಿನ ಉದ್ಯಾನವನ್ನು ವಾರ್ಡ್ ಅಧ್ಯಕ್ಷರಾದ ಸುಮನ್ ಪ್ರಶಾಂತ್ ನೇತೃತ್ವದಲ್ಲಿ ನಡೆಸಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel