ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೇಲ್ಮನೆ : ನಾಲ್ಕು ಕ್ಷೇತ್ರ.. 40 ಅಭ್ಯರ್ಥಿಗಳು.. ಇಂದು ಮತದಾನ

Mahesh M Dhandu by Mahesh M Dhandu
October 28, 2020
in Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಮೇಲ್ಮನೆ : ನಾಲ್ಕು ಕ್ಷೇತ್ರ.. 40 ಅಭ್ಯರ್ಥಿಗಳು.. ಇಂದು ಮತದಾನ ( Voting beginning )

ಬೆಂಗಳೂರು : ವಿಧಾನಪರಿಷತ್ ನ ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ಆರಂಭವಾಗಿದೆ ( Voting beginning ). ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ.

Related posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

August 12, 2026
crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

August 12, 2026

ಇಂದಿನ ಮತದಾನಕ್ಕಾಗಿ ಒಟ್ಟು 549 ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಚುನಾವಣಾ ಕಣದಲ್ಲಿ 40 ಅಭ್ಯರ್ಥಿಗಳಿದ್ದು, ನವೆಂಬರ್ 2 ರಂದು ಮತ ಎಣಿಕೆ ನಡೆಯಲಿದೆ.

ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಹಾವೇರಿ, ಗದಕ, ಉತ್ತರಕನ್ನಡ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಬೆಳಗ್ಗೆಯಿಂದ ಮತದಾನ ಪ್ರಾರಂಭವಾಗಿದೆ.

Voting beginning

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 146 ಮತ ಕೇಂದ್ರಗಳು, ಆಗ್ನೇಯ ಪದವೀದರ ಕ್ಷೇತ್ರದಲ್ಲಿ 187 ಮತಕೇಂದ್ರಗಳು, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 69 ಮತಕೇಂದ್ರಗಳು ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 147 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಆರ್.ಎಂ.ಕುಬೇರಪ್ಪ ಅವರು ರಾಣೆಬೆನ್ನೂರ ನಗರದ ನಗರಸಭಾ ಪ್ರೌಢಶಾಲೆಯ ಮತಗಟ್ಟೆ 102 ರಲ್ಲಿ ಮತ ಚಲಾಯಿಸಿದರು.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಶಿಕ್ಷಕರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.

ಕಲಬುರಗಿಯಲ್ಲಿ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ನಿಧಾನಗತಿಯಲ್ಲಿ ಮತದಾರರು ಮತ ಕೇಂದ್ರಗಳತ್ತ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ : ಬಿಹಾರ ಎಲೆಕ್ಷನ್ : ಮೊದಲ ಹಂತದ ಮತದಾನ ಆರಂಭ

ಇನ್ನು ಮತಕೇಂದ್ರಗಳ ಸುತ್ತ 6 ಜನ DYSP, 12 CPI, 28 PSI, 76 ASI, 106 HC, 192 PC, 29 WPC, 11 DAR 02 KSRP ತುಕಡಿಗಳ ನಿಯೋಜನೆ ಮಾಡಲಾಗಿದೆ‌.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳಿದ್ದರೇ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 5 ಅಭ್ಯರ್ಥಿಗಳಿದ್ದಾರೆ. ಇನ್ನು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿ ಕಣದಲ್ಲಿದ್ದರೇ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

ಈ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ತಲಾ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ನೋಂದಾಯಿತ ಪಕ್ಷದಿಂದ 6 ಅಭ್ಯರ್ಥಿಗಳು ಮತ್ತು 22 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

Voting beginning

ಎಲ್ಲಿ ಹೇಗೆ ಮತ ಎಣಿಕೆ
ನವೆಂಬರ್ 2 ರಂದು ಇಂದಿನ ಮತದಾನದ ಮತ ಎಣಿಕೆ ನಡೆಯಲಿದ್ದು, ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪದವೀಧರ ಕ್ಷೇತ್ರದ ಮತ ಎಣಿಕೆಯು ನಡೆಯಲಿದೆ.ಇಲ್ಲಿ ಒಂದು ಹಾಲ್’ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಗುಲ್ಬರ್ಗ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯು ನಡೆಯಲಿದೆ. ಇಲ್ಲಿ ಒಂದು ಹಾಲ್’ನಲ್ಲಿ ಏಳು ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ : ಸಿದ್ದರಾಮಯ್ಯ ವಾಗ್ದಾಳಿ

ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಮತ ಕ್ಷೇತ್ರದ ಮತ ಎಣಿಕೆಯು ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ. ಇಲ್ಲಿ ಮತ ಎಣಿಕೆಗೆ ಪ್ರತ್ಯೇಕವಾಗಿ ಎರಡು ಹಾಲ್ ನಲ್ಲಿ ತಲಾ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: karnatakaMLC electionVoting
ShareTweetSendShare
Join us on:

Related Posts

world-elephant-day-vantara-conservation-initiative

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ

by admin
August 12, 2026
0

ವಿಶ್ವ ಆನೆ ದಿನ: ವಂತಾರಾದ ಆನೆ ಸಂರಕ್ಷಣಾ ಅಭಿಯಾನ; ದೇಶ-ವಿದೇಶಗಳಲ್ಲಿ ಸೇವೆ ವಿಸ್ತರಣೆ   ಜಾಮ್‌ನಗರ, ಆಗಸ್ಟ್ 12: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಆರಂಭಿಸಿದ ವಂತಾರಾ ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಹಂಚಿಕೊಂಡಿದೆ. ಆನೆಗಳ ಆರೈಕೆ, ಮಾವುತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಹಾಗೂ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ವಂತಾರಾ ಭಾರತದ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕಾರ್ಯ ನಿರ್ವಹಿಸುತ್ತಿದೆ.  ವಂತಾರಾದಲ್ಲಿ ಸದ್ಯಕ್ಕೆ 260ಕ್ಕೂ ಹೆಚ್ಚು ಏಷ್ಯನ್ ಆನೆಗಳನ್ನು ಆರೈಕೆ ಮಾಡಲಾಗುತ್ತಿದೆ. ಇದು 'ಗೌರಿ'ಯಿಂದ ಆರಂಭವಾಗಿತ್ತು, ಇದನ್ನು ಅನಂತ್ ಅಂಬಾನಿ ಮೊದಲು ರಕ್ಷಿಸಿದ್ದರು. ಇದರ ನಂತರ ಆನೆಗಳಿಗೆ ವಿಶೇಷ ಆರೈಕೆ ಮತ್ತು ಗೌರವಯುತ ಜೀವನವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಹೆಜ್ಜೆಯು ನಿರಂತರವಾಗಿ ಮುಂದುವರಿದಿದೆ.  ಅನಂತ್ ಅಂಬಾನಿ ಅವರು ಮಾತನಾಡಿ, "ಆನೆಗಳು ನನ್ನ ಹೃದಯದಲ್ಲಿ ಮತ್ತು ವಂತಾರಾದ ಪಯಣದಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರತಿ ಆನೆಗೂ ತನ್ನದೇ ಆದ ಕಥೆಯಿದೆ ಮತ್ತು ಪ್ರತಿ ರಕ್ಷಣೆಯು ಅವುಗಳ ಆರೈಕೆಯ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ. ಗೌರಿಯ ರಕ್ಷಣೆಯಿಂದ ಆರಂಭವಾದ ಈ ಪಯಣ ಈಗ ಆನೆಗಳ ಕಲ್ಯಾಣ, ಅವುಗಳನ್ನು ಆರೈಕೆ ಮಾಡುವವರಿಗೆ ಬೆಂಬಲ, ಜ್ಞಾನ ಹಂಚಿಕೆ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಸಂರಕ್ಷಣಾ ಪ್ರಯತ್ನಗಳವರೆಗೆ ತಲುಪಿದೆ. ವಿಶ್ವ ಆನೆ ದಿನದಂದು ಈ ಅದ್ಭುತ ಜೀವಿಗಳನ್ನು ಗೌರವಿಸುತ್ತಾ ಅವುಗಳ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಹೇಳುತ್ತೇವೆ," ಎಂದರು.   ಜೈಪುರದ ಆನೆ ಗ್ರಾಮದಲ್ಲಿ ವಿಶೇಷ ಸೌಲಭ್ಯಗಳು  ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಸಂಜಯ್ ಶರ್ಮಾ ಅವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಜೈಪುರ್ ಆನೆ ಗ್ರಾಮದಲ್ಲಿ ಆನೆಗಳ ಆರೈಕೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ವಂತಾರಾದೊಂದಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಇದರಡಿಯಲ್ಲಿ ಆಧುನಿಕ ಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಆಸ್ಪತ್ರೆ, ಪೋಷಕಾಂಶ ಕೇಂದ್ರ ಮತ್ತು ಜಲಚಿಕಿತ್ಸಾ (ಹೈಡ್ರೋಥೆರಪಿ) ಸೌಲಭ್ಯಗಳು ಸೇರಿವೆ. ವಯಸ್ಸಿನಲ್ಲಿ ಹಿರಿಯ ಆನೆಗಳಿಗಾಗಿ ಪ್ರತ್ಯೇಕ ನಿವೃತ್ತಿ ಮತ್ತು ಆರೈಕೆ ಕೇಂದ್ರವನ್ನೂ ನಿರ್ಮಿಸಲಾಗುವುದು.  ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಕಲ್ಯಾಣ ಕಾರ್ಯಕ್ರಮ  ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪ ಸಮೂಹಗಳಲ್ಲಿ ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ವಂತಾರಾ ಆನೆ ಕಲ್ಯಾಣ ಔಟ್‌ರೀಚ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದೆ. ಇದರ ಅಡಿಯಲ್ಲಿ 182 ಆನೆಗಳು ಮತ್ತು 242 ಮಾವುತರನ್ನು ಒಳಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಆನೆಗಳ ಆರೋಗ್ಯ, ಮಾನವೀಯ ರೀತಿಯಲ್ಲಿ ಆರೈಕೆ, ಪ್ರಥಮ ಚಿಕಿತ್ಸೆ ಮತ್ತು ಅತ್ಯುತ್ತಮ ನಿರ್ವಹಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗಿದೆ. ಪಶುವೈದ್ಯಕೀಯ ಹಾಗೂ ಕಲ್ಯಾಣ ಕಿಟ್‌ಗಳೊಂದಿಗೆ ಪೌಷ್ಟಿಕಾಂಶದ ಬೆಂಬಲವನ್ನೂ ಒದಗಿಸಲಾಗಿದೆ.   ಮಕ್ಕಳಲ್ಲಿ ಆನೆಗಳ ಬಗ್ಗೆ ಸಂವೇದನೆಯನ್ನು ಹೆಚ್ಚಿಸಲು ವಂತಾರಾ 'ಮೈ ಫ್ರೆಂಡ್ ಲೀಲಾವತಿ' ಸಾಮಾಜಿಕ ಜಾಲತಾಣ ಅಭಿಯಾನವನ್ನೂ ಆರಂಭಿಸಿದೆ. ಇದರ ಮೂಲಕ 'ಲೀಲಾವತಿ' ಹೆಸರಿನ ಹೆಣ್ಣಾನೆಯ ಕಥೆಯ ಮೂಲಕ ಮಕ್ಕಳಿಗೆ ದಯೆ, ಕರುಣೆ ಮತ್ತು ಪ್ರಾಣಿಗಳ ಗೌರವದ ಸಂದೇಶವನ್ನು ಸಾರಲಾಗುತ್ತಿದೆ.   ಮಾನವ-ಆನೆ ಸಂಘರ್ಷ, ಜಾಗತಿಕ ಸಹಕಾರ  ಮಾನವ ಆನೆ ಸಂಘರ್ಷವನ್ನು ಕಡಿಮೆ ಮಾಡಲು ವಂತಾರಾ ಎಲಿಫೆಂಟ್ ಪ್ರೊಟೆಕ್ಷನ್ ಇನಿಷಿಯೇಟಿವ್ (EPI) ಫೌಂಡೇಷನ್‌ಗೂ ಅನುದಾನ ನೀಡುತ್ತಿದೆ. ಇದರ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಆನೆಗಳಿರುವ ದೇಶಗಳ ತಜ್ಞರು, ಸಂರಕ್ಷಣೆ ಮಾಡುವವರು ಮತ್ತು ಯುವಕರನ್ನು 2027ರ ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯುವ ಜಾಗತಿಕ ಸಮ್ಮೇಳನಗಳಲ್ಲಿ ಭಾಗವಹಿಸಲು ಬೆಂಬಲ ನೀಡಲಾಗುತ್ತದೆ. ಇದರೊಂದಿಗೆ ಇಪಿಐ ಯೂಥ್ ಅಂಬಾಸಿಡರ್ಸ್ ಪ್ರೋಗ್ರಾಂ ಅನ್ನು ಮೊದಲ ಬಾರಿಗೆ ಭಾರತಕ್ಕೂ ವಿಸ್ತರಿಸಲು ಸಹಾಯ ಮಾಡಲಾಗುವುದು.   ವಂತಾರಾದ ಪ್ರಕಾರ, ತಳಮಟ್ಟದಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳನ್ನು ಎದುರಿಸಲು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡುವ ಪಶುವೈದ್ಯಕೀಯ ತಂಡಗಳು, ಥರ್ಮಲ್ ಡ್ರೋನ್ ಕಣ್ಗಾವಲು ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಯಗೊಂಡ ಆನೆಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಮಾನವರು ಮತ್ತು ಆನೆಗಳ ನಡುವೆ ದೀರ್ಘಕಾಲದ ಉತ್ತಮ ಸಹ-ಅಸ್ತಿತ್ವವನ್ನು ಉತ್ತೇಜಿಸುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.  

crossing-paths-documentary-samyukta-hornad-human-elephant-conflict-karnataka

ಕ್ರಾಸಿಂಗ್ ಪಾತ್ಸ್ (CROSSING PATHS): ಮಾನವ-ಆನೆ ಸಂಘರ್ಷದ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಯುಕ್ತಾ ಹೊರನಾಡು ನಿರ್ದೇಶನ

by admin
August 12, 2026
0

'ವಿಶ್ವ ಆನೆಗಳ ದಿನ'ದಂದು ಅನಾವರಣಗೊಳ್ಳುತ್ತಿರುವ 'ಕ್ರಾಸಿಂಗ್ ಪಾತ್ಸ್' ಸಾಕ್ಷ್ಯಚಿತ್ರದ ಮೂಲಕ ನಟಿ ಸಂಯುಕ್ತಾ ಹೊರನಾಡು ಅವರು ಪ್ರಥಮ ಬಾರಿಗೆ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ...

second-case-of-seetharam-amazon-prime-streaming-record-250-million-minutes

ಅಮೆಜಾನ್ ಪ್ರೈಮ್‌ನಲ್ಲಿ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಐತಿಹಾಸಿಕ ಸಾಧನೆ: 25 ಕೋಟಿಗೂ ಅಧಿಕ ಸ್ಟ್ರೀಮಿಂಗ್ ನಿಮಿಷಗಳ ದಾಖಲೆ!

by admin
August 12, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ದ ಕಂಟೆಂಟ್ ಆಧಾರಿತ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕನ್ನಡದ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' (Second Case of Seetharam)...

varamahalakshmi-vrata-mantra-for-wealth-and-prosperity

ವರಮಹಾಲಕ್ಷ್ಮಿ ವ್ರತ ದಿನದಂದು ಒಂದು ಮನಇಚ್ಚಾ ಪದ 8 ಬಾರಿ ಹೇಳಿದರೆ ಅಷ್ಟ ಐಶ್ವರ್ಯ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ.

by admin
August 12, 2026
0

ಮನೆಗೆ ಅಷ್ಟ ಐಶ್ವರ್ಯ ತರುವ ಮಂತ್ರ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

depuy-synthes-ralc-bangalore-orthopedic-training-center

ಮೂಳೆ ಶಸ್ತ್ರಚಿಕಿತ್ಸಾ ವಲಯದಲ್ಲಿ ಹೊಸ ಮೈಲಿಗಲ್ಲು, ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅತ್ಯಾಧುನಿಕ ತರಬೇತಿ ಕೇಂದ್ರ

by admin
August 12, 2026
0

ಬೆಂಗಳೂರು: ಮೂಳೆ ಚಿಕಿತ್ಸಾ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ 'ಡಿಪ್ಯೂ ಸಿಂಥೆಸ್' ಸಂಸ್ಥೆಯು, ಬೆಂಗಳೂರಿನ ಪ್ರತಿಷ್ಠಿತ 'ರಾಮಯ್ಯ ಅಡ್ವಾನ್ಸ್ಡ್ ಲರ್ನಿಂಗ್ ಸೆಂಟರ್' (ಆರ್‌ಎಎಲ್‌ಸಿ) ಜೊತೆ ಮಹತ್ವದ ಒಪ್ಪಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram