ಚುನಾವಣೆ ಬಳಿಕ ಬದಲಾವಣೆ ನಿಶ್ಚಿತ : ಸಂಪುಟ ವಿಸ್ತರಣೆ ( cabinet expansion ) ಬಗ್ಗೆ ಸಿಎಂ ಮಾತು
ಬೆಂಗಳೂರು : ರಾಜರಾಜೇಶ್ವರಿ ಹಾಗೂ ಶಿರಾ ಉಪಚುನಾವಣೆ ಬಳಿಕ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ ಎಂದು ಸಂಪುಟ ವಿಸ್ತರಣೆ ( cabinet expansion ) ಕುರಿತಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶಿರಾದಲ್ಲಿ ಪ್ರಚಾರಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಪುಟ ವಿಸ್ತರಣೆ ವಿಚಾರ ಸಂಬಂಧ ಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತುಕತೆ ನಡೆಸಿ ಬರುತ್ತೇನೆ. ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳಿದರು.
ಚುನಾವಣೆ ಮುಗಿದ ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ ಎಂದ ಬಿಎಸ್ ವೈ, ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ದೊಡ್ಡ ಮುಖಭಂಗ ಆಗುತ್ತದೆ. ಇದುವರೆಗೂ ನಾನು ಒಂದು ಶಬ್ದ ಮಾತನಾಡಿಲ್ಲ. ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಇದುವರೆಗೂ ಯಾವುದೇ ಟೀಕೆ ಮಾಡಿಲ್ಲ, ಯಾರ ಹೆಸರು ಹೇಳಿಲ್ಲ. ಚುನಾವಣೆ ಮುಗಿದ ಮೇಲೆ ಅವರೇ ಉತ್ತರ ಕೊಡಲಿ. ನಾನು ಪ್ರಚಾರಕ್ಕೆ ಹೋಗಬೇಕು ಅಂತಾ ಇರಲಿಲ್ಲ. ಆದರೆ ಸಿದ್ದರಾಮಯ್ಯ, ದೇವೇಗೌಡರು, ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಹೋಗಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸರ್ಕಾರ ಸಾಲಮನ್ನಾ ಹಣ ಬಿಡುಗಡೆ ಮಾಡಿಲ್ಲ : ಹೆಚ್ ಡಿಕೆ
ಮುಖ್ಯಮಂತ್ರಿಯಾಗಿ ನಾನು ಹೋಗಲಿಲ್ಲ ಅಂದರೆ ತಪ್ಪಾಗುತ್ತದೆ. ಅದಕ್ಕೆ ಎರಡು ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಇಂದು ಶಿರಾ, ನಾಳೆ ಆರ್.ಆರ್ ನಗರದಲ್ಲಿ ಪ್ರಚಾರ ನಡೆಸಲಿದ್ದೇನೆ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಕುರಿತಾಗಿ ಕಳೆದ ಕೆಲ ತಿಂಗಳಿನಿಂದ ಚರ್ಚೆ ಆಗುತ್ತಲೇ ಇದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೆಹಲಿ ವರಿಷ್ಠರ ಜೊತೆ ಚರ್ಚೆ ನಡೆಸಿದ್ದರು. ಆದ್ರೆ ಸಂಪುಟ ವಿಸ್ತರಣೆಗೆ ದೆಹಲಿ ಬಿಗ್ ಬಾಸ್ ಗಳು ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಈ ಮಧ್ಯೆ ಉಪಚುನಾವಣೆಗಳು ಕೂಡ ಘೋಷಣೆ ಆಗಿದ್ದು, ಸಂಪುಟ ಸರ್ಜರಿಗೆ ತಾತಾಲ್ಕಿಕ ಬ್ರೇಕ್ ಬಿತ್ತು.
ಸಂಭಾವ್ಯ ಸಚಿವರ ಪಟ್ಟಿ
1. ಎಂಟಿಬಿ ನಾಗರಾಜ್
2. ಆರ್. ಶಂಕರ್
3. ಉಮೇಶ್ ಕತ್ತಿ
4. ಹೆಚ್. ವಿಶ್ವನಾಥ್ ಅವರಿಗೂ ಮಂತ್ರಿಗಿರಿ ಸಾಧ್ಯತೆ
ಇದನ್ನೂ ಓದಿ : ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
ಈ ಮೂವರಿಗೆ ಸಚಿವ ಸ್ಥಾನ ನೀಡುವುದು ಈ ಹಿಂದೆಯೇ ಫಿಕ್ಸ್ ಆಗಿತ್ತು. ಅಂದರೆ ಕಳೆದ ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನಗೊಂಡ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರಿಗೆ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ಅದರಂತೆ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಎಸ್.ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಬಿ.ಸಿ ಪಾಟೀಲ್, ಸುಧಾಕರ್ ಸೇರಿದಂತೆ ಇನ್ನು ಕೆಲವರಿಗೆ ಮಂತ್ರಿ ಸ್ಥಾನ ದೊರಕಿದೆ.
ಮೂವರು ಮೂಲ ಬಿಜೆಪಿ ಶಾಸಕರಿಗೂ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಹಾಗೂ ಜೆ.ಪಿ ನಡ್ಡಾ ಜತೆ ಚರ್ಚೆ ನಡೆಸಲಿದ್ದಾರೆ. ಅವರು ಯಾರು ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ.
ಮೂಲಗಳ ಪ್ರಕಾರ…
1. ಬಸನಗೌಡ ಪಾಟೀಲ್ ಯತ್ನಾಳ್
2. ಸುನಿಲ್ಕುಮಾರ್
3. ಅರವಿಂದ ಲಿಂಬಾವಳಿ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel