ಹಿಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಿದ್ಧ : ಬಿ.ಸಿ.ಪಾಟೀಲ್ ಪೂರ್ವಭಾವಿ ಸಭೆ
ಬೆಂಗಳೂರು : ಈ ಬಾರಿ ಕೃಷಿ ಇಲಾಖೆ 2020-21 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು 32.00 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕೈಗೊಳ್ಳುವ ಗುರಿಯನ್ನು ಹಮ್ಮಿಕೊಂಡಿದ್ದು, ಗುರಿಯನ್ನು ತಲುಪಲು ಹಾಗೂ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಾಗಿ ಕ್ರಮಗಳನ್ನು ಕೈಗೊಂಡಿದೆ.
ಈ ನಿಟ್ಟಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಕಾಸಸೌಧದ ಕಚೇರಿಯಲ್ಲಿ ಕೃಷಿ ಇಲಾಖಾಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು.
ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಮುಂಗಾರಿನಂತೆ ಹಿಂಗಾರಿನಲ್ಲಿಯೂ ಕೂಡ ಹೆಚ್ಚಿನ ಬಿತ್ತನೆಯಾಗುವ ನಿರೀಕ್ಷೆಯಿದೆ.
ಹೀಗಾಗಿ ಹಿಂಗಾರು ಬಿತ್ತನೆಗೆ ಬೇಕಾದ ರಸಗೊಬ್ಬರ ಯೂರಿಯಾ ಸೇರಿದಂತೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ ಸಚಿವರು ಮಾಹಿತಿ ಪಡೆದರು.
ಹಿಂಗಾರು ಹಂಗಾಮಿನಲ್ಲಿ 32.00 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಈಗಾಗಲೇ 11.19 ಲಕ್ಷ ಹೆಕ್ಟೇರ್ ಅಂದರೆ ಶೇ.35ರಷ್ಟು ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ.
ಜೋಳ ಮತ್ತು ಕಡಲೆ ಹಿಂಗಾರು ಪ್ರಮುಖ ಬೆಳೆಗಳಾಗಿದ್ದು, ಕಳೆದ ಅಕ್ಟೋಬರ್ 29 ರವರೆಗೆ ದ್ವಿದಳ ಧಾನ್ಯಗಳು 14.28 ಲಕ್ಷ ಹೆಕ್ಟೇರ್ ಗುರಿಯಲ್ಲಿ5.94 ಲಕ್ಷ ಹೆಕ್ಟೇರ್ ಸಾಧನೆಯಾಗಿದೆ.
ಇದನ್ನೂ ಓದಿ : ಭಾಲ್ಕಿ ವಸತಿ ಹಗರಣ: ಖಂಡ್ರೆ-ಖೂಬಾ ಬಹಿರಂಗ ಚರ್ಚೆಗೆ ಬಿತ್ತು ಬ್ರೇಕ್..!
ಒಟ್ಟು ಆಹಾರ ಧಾನ್ಯಗಳ 27.54 ಲಕ್ಷ ಹೆಕ್ಟೇರ್ ಪೈಕಿ 9.73 ರಷ್ಟು ಸಾಧನೆಯಾಗಿದ್ದು, 26.02 ಲಕ್ಷ ಟನ್ ಉತ್ಪಾದನೆಯಾಗಿದೆ.
ಇನ್ನು 3.53 ರಷ್ಟು ಎಣ್ಣೆಕಾಳುಗಳ ಗುರಿಯಿದ್ದು, ಈ ಪೈಕಿ 0.89 ಲಕ್ಷ ಹೆಕ್ಟೇರ್ ಸಾಧನೆಯಾಗಿ 2.81 ಲಕ್ಷ ಟನ್ ಉತ್ಪಾದನೆ, 0.48 ಲಕ್ಷ ಹೆಕ್ಟೇರ್ ಹತ್ತಿ ಗುರಿಯಿದ್ದು, ಇದರಲ್ಲಿ 0.08 ಲಕ್ಷ ಹೆಕ್ಟೇರ್ ಸಾಧನೆ, 0.98 ಲಕ್ಷ ಟನ್ ಉತ್ಪಾದನೆ ಹಾಗೂ 0.43 ರಷ್ಟು ಕಬ್ಬು ಗುರಿಯಲ್ಲಿ 0.49 ರಷ್ಟು ಸಾಧನೆಯಾಗಿದೆ.
ರೈತರಿಗೆ ಪ್ರಮುಖ ಕೃಷಿ ಸಾಮಗ್ರಿಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸರಬರಾಜು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಹಿಂಗಾರು ಹಂಗಾಮಿನಲ್ಲಿ ಪ್ರಮಾಣಿತ ಬಿತ್ತನೆ ಬೀಜದ ಅಂದಾಜು ಬೇಡಿಕೆ 3.28 ಲಕ್ಷ ಕ್ವಿಂಟಾಲ್ ಗಳಷ್ಟಿದ್ದು, ಇದುವರೆವಿಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ 1,55,989.29 ಕ್ವಿಂ.ಗಳಷ್ಟು ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ವಿನಯ್ ಕುಲಕರ್ಣಿ ವಿರುದ್ಧ ಬಿಜೆಪಿ ರಾಜಕೀಯ ಸೇಡು: ಡಿಕೆಶಿ ಕೆಂಡಾಮಂಡಲ..!
ಹಂಗಾಮಿನಲ್ಲಿ 2.93 ಲಕ್ಷ ಮೆಟ್ರಿಕ್ ಟನ್ ವಿವಿಧ ರಾಸಾಯನಿಕ ರಸಗೊಬ್ಬರಗಳ ಬೇಡಿಕೆ ಅಂದಾಜಿಸಿ ಸಕಾಲದಲ್ಲಿ ಪೂರೈಕೆಗಾಗಿ ಜಿಲ್ಲಾವಾರು, ಮಾಹೆವಾರು ಮತ್ತು ಸಂಸ್ಥೆವಾರು ಸರಬರಾಜು ಮಾಡುವ ಸಿದ್ದತೆ ಮಾಡಲಾಗಿದೆ.
ಅಕ್ಟೋಬರ್ 1 ರಿಂದ 31 ರವರೆಗೆ ಹಿಂಗಾರಿಗೆ 9.39 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರ ಸರಬರಾಜು ಹಾಗೂ 9.62 ಲಕ್ಷ ಟನ್ ದಾಸ್ತಾನು ಇರುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel