ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ನಟ ಜಗ್ಗೇಶ್: ಸಿನಿ ಗಣ್ಯರಿಂದ ಅಭಿನಂದನೆ
ಸ್ಯಾಂಡಲ್ ವುಡ್ ನ ನವರಸನಾಯಕ ಎಂದೇ ಖ್ಯಾತಿಗಳಿಸಿರುವ ನಟ ಜಗ್ಗೇಶ್ ಕಲಾ ಸೇವೆಗೆ 40 ವರ್ಷ ತುಂಬಿದೆ. ಚಿತ್ರರಂಗದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ಜಗ್ಗೇಶ್ ಇಂದು ದೊಡ್ಡ ನಟನಾಗಿ ಬೆಳೆದುನಿಂತಿದ್ದಾರೆ. ಸದ್ಯ 40ರ ಸಂಭ್ರಮದಲ್ಲಿರುವ ಜಗ್ಗೇಶ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ.
ನಟ ಜಗ್ಗೇಶ್ 1980 ನವೆಂಬರ್ 17ರಂದು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಈ ಪಯಣಕ್ಕೆ ಈಗ 40 ವರ್ಷದ ಸಂಭ್ರಮ. ಈ ನಾಲ್ಕು ದಶಕಗಳಲ್ಲಿ ಸಹಕಾರ ನೀಡಿದ, ಹಾರೈಸಿದವರನ್ನು, ಜೊತೆಗೆ ನಿಂತವರನ್ನು ನಟ ಜಗ್ಗೇಶ್ ನೆನಪಿಸಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ನವರಸನಾಯಕ ಜಗ್ಗೇಶ್ ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಹಾಸ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದ ಜಗ್ಗೇಶ್ ಅವರು ಈ ಸಂತಸವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟ್ಟರ್ ನಲ್ಲಿ ‘1980 ನವೆಂಬರ್ 17ಕ್ಕೆ ನಾ ಬಂದು ಇಂದಿಗೆ 2020 ನವೆಂಬರ್ 17ಕ್ಕೆ 40ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕ ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ,ಮಾದ್ಯಮ ಕನ್ನಡದ ಮನಸ್ಸುಗಳು..! ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದ ಹರಿಸಿದ ಅಮ್ಮ, ಜೊತೆ ನಿಂತ ಪರಿಮಳ, ಕೋಮಲ್ ರಾಯರ ದಯೆಗೆ ಆ ಜನ್ಮ ಋಣಿ ಹರಸಿ’ ಎಂದು ಬರೆದುಕೊಂಡಿದ್ದಾರೆ.
ಅಂದ್ಹಾಗೆ ಜಗ್ಗೇಶ್ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ತಾರಯರು ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.
ನೆನಪಿರಲಿ ಪ್ರೇಮ್
ನಟ ನೆನಪಿರಲಿ ಪ್ರೇಮ್ ಅವರು ಜಗ್ಗೇಶ್ ಅವರ ಬಗ್ಗೆ ಟ್ವೀಟ್ ಮಾಡಿದ್ದು, ‘ಕಲಾಬಂಧು, ನವರಸ ನಾಯಕ, ನಮ್ಮೆಲ್ಲರ ಪ್ರೀತಿಯ ಜಗ್ಗೇಶ್ ಅಣ್ಣ ಇಂದು ಸಿನಿರಂಗಕ್ಕೆ ಬಂದು 40 ವರ್ಷ ಪೂರ್ಣಗೊಂಡಿದ್ದು ಅವರಿಗೆ ತುಂಬು ಹೃದಯದ ಅಭಿನಂದನೆಗಳು’ ಎಂದಿದ್ದಾರೆ.
ಕಬ್ಜ ಸಿನಿಮಾದ ಮೋಷನ್ ಪೋಸ್ಟರ್ ನಲ್ಲಿ , ಉಪ್ಪಿ ರೆಟ್ರೋ ಲುಕ್ ಗೆ ಅಭಿಮಾನಿಗಳು ಫಿದಾ..!
ರವಿಶಂಕರ್ ಗೌಡ
‘ಕಷ್ಟ ಸಹಿಸಿ, ನೋವು ಅಳಿಸಿ, ಅವಮಾನ ಅನುಭವಿಸಿ, ಹಸಿವನ್ನು ಅದುಮಿ, ಯಶಸ್ವಿಯಾಗಿ 40 ವರ್ಷದಿಂದ ನಗಿಸುವ ಕಾಯಕ ಮಾಡುತ್ತಲೇ ಅಪಾರ ಅಭಿಮಾನಿಗಳನ್ನು ಗಳಿಸುವುದು ಇಂತಹ ಶ್ರೇಷ್ಠ ನಟನಿಗೆ ಮಾತ್ರ ಸಾಧ್ಯ. ಇಂದಿಗೂ ನಮ್ಮಂತವರಿಗೆ ಸ್ಫೂರ್ತಿಯ ಸೆಲೆಯಾಗಿರುವ ನೀವು ನೂರು ವರ್ಷ ಪೂರೈಸಿ. ಅಭಿನಂದನೆಗಳು ಪ್ರೀತಿಯ ಜಗ್ಗಣ್ಣ.’ ಎಂದಿದ್ದಾರೆ ರವಿಶಂಕರ್ ಗೌಡ.
ರಘುರಾಮ್
ನಟ ಮತ್ತು ನಿರ್ದೇಶಕರಾದ ರಘುರಾಮ್ ಅವರು ಜಗ್ಗಣ್ಣನ ಬಗ್ಗೆ ಮಾತನಾಡಿ, ‘ಅವಮಾನಗಳನ್ನು ಮೆಟ್ಟಿ, ಅನುಮಾನಗಳನ್ನು ಅಟ್ಟಿ, ಸದ್ಮಾರ್ಗದ, ಸನ್ಮಾನದ ಕಡೇ ದೃಷ್ಟಿ ಇಟ್ಟ ನಮ್ಮ ಜಗಣ್ಣನ ಬಣ್ಣದ ಬದುಕಿಗೆ 40 ವರ್ಷ.ಇನ್ನಷ್ಟು ನಮ್ಮನ್ನ ನಗಿಸಿ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ, ಸದಾಕಾಲ ಬೆಳ್ಳಿಪರದೆಯಲ್ಲಿ, ಕನ್ನಡಿಗರ ಹೃದಯದಲ್ಲಿ ವಿಜೃಂಭಿಸಿ .ಇದು ನಿಮ್ಮ ಗುರಿಗೆ ನಂಬಿಕೆಗೆ ಹಠಕ್ಕೆ, ಛಲಕ್ಕೆ, ಸಾಧನೆಗೆ 40ವರ್ಷ’ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಪವನ್ ಒಡೆಯರ್ ಮತ್ತು ಕಾರ್ತಿಕ್ ಗೌಡ ನಿರ್ದೇಶಕ ಪವನ್ ಒಡೆಯರ್ ಸಹ ವಿಶ್ ಮಾಡಿದ್ದಾರೆ. ‘ಹೃದಯ ಪೂರ್ವಕ ಶುಭಾಶಯಗಳು ಅಣ್ಣ’ ಎಂದು ಹೇಳಿದ್ದಾರೆ. ನಿರ್ಮಾಪಕ ಕಾರ್ತಿಕ್ ಗೌಡ ಸಹ ಶುಭಾಶಯ ತಿಳಿಸಿದ್ದಾರೆ. ‘ಶುಭಾಶಯಗಳು ಅಣ್ಣ’ ಎಂದು ಟ್ವೀಟಿ ಮಾಡಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಅಂಬಿಗಾಗಿ ನಿರ್ಮಾಣವಾದ ಮಂದಿರ..!
ಸಂತೋಷ್ ಆನಂದರಾಮ್
ನಿರ್ದೇಶಕ ಸಂತೋಷ್ ಆನಂದರಾಮ್ ಸಹ ಜಗ್ಗೇಶ್ ಅವರಿಗೆ ವಿಶ್ ಮಾಡಿದ್ದಾರೆ. ‘ಭಾರತೀಯ ಚಿತ್ರ ರಂಗದಲ್ಲೇ 40 ವರ್ಷಗಳಿಂದ ತಮ್ಮ ಹಾಸ್ಯ ಹಾಗು ಅಭಿನಯದಿಂದ ಜನಮಾನಸವನ್ನು ಗೆಲ್ಲುತ್ತಿರುವ, ಪ್ರಭಾವಿಸುತ್ತಿರುವ Drama ದಿಂದ Digital ವರೆಗೂ ತಮ್ಮ ನವರಸ ಅಭಿನಯವನ್ನ ಪ್ರದರ್ಶಿಸುತ್ತಿರುವ ನಿಮಗೆ ಅನಂತ ನಮನಗಳು’ ಎಂದಿದ್ದಾರೆ.
ಇನ್ನೂ ಜಗ್ಗೇಶ್ ಅವರು ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ 40 ವರ್ಷಗಳು ತುಂಬಿದ ಹಿನ್ನೆಲೆ ಕಾಮನ್ ಡಿಪಿ ರಿಲೀಸ್ ಮಾಡಲಾಗಿದೆ. ಸಿಂಹಾಸನದ ಮೇಲೆ ಜಗ್ಗೇಶ್ ಕುಳಿತಿರುವ ಫೋಟೋ ಶೇರ್ ಮಾಡಲಾಗಿದ್ದು, ಸಾಮಾಜಿಕ ಜಾಲಾತಣಗಳಲ್ಲಿ ರಾರಾಜಿಸುತ್ತಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










